ETV Bharat / state

ತಮಿಳು ನಾಮಫಲಕ ತೆಗೆಯುವಂತೆ ಆಗ್ರಹಿಸಿ‌ ವಾಟಾಳ್ ನಾಗರಾಜ್ ಪ್ರತಿಭಟನೆ

author img

By

Published : Jul 10, 2021, 7:30 PM IST

ಗಡಿಯಲ್ಲಿರುವ ತಮಿಳು, ಹಿಂದಿ ಬೋರ್ಡ್ ತೆಗೆಯಬೇಕು. ಬ್ಯಾಂಕ್​ಗಳಲ್ಲಿ ಕನ್ನಡದ ಚಲನ್ ನೀಡಬೇಕು, ಬ್ಯಾಂಕ್​ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು..

Vatal Nagaraj
ವಾಟಾಳ್ ನಾಗರಾಜ್

ಕೋಲಾರ : ತಮಿಳು ನಾಮಫಲಕಗಳನ್ನು ತೆಗೆಯುವಂತೆ ಆಗ್ರಹಿಸಿ‌ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ತಮಿಳು ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದು ಪ್ರತಿಭಟನೆ ನಡೆಸಿರುವ ಘಟನೆ ಕೋಲಾರದಲ್ಲಿ ಜರುಗಿದೆ.

ತಮಿಳು ನಾಮಫಲಕಗಳನ್ನು ತೆಗೆಯುವಂತೆ ಆಗ್ರಹಿಸಿ‌ ಕೋಲಾರದಲ್ಲಿ ಪ್ರತಿಭಟನೆ

ಕೋಲಾರ ಜಿಲ್ಲೆಯ‌‌ ಕೆಜಿಎಫ್ ನಗರದಲ್ಲಿ ಬಸ್ ನಿಲ್ದಾಣ ಸೇರಿದಂತೆ ತಮಿಳು ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಮಿಳು ನಾಮಫಲಕಗಳಿಗೆ ಮಸಿ ಬಳಿಯದಂತೆ ತಮಿಳು ಸಂಘಟನೆಯವರು ವಿರೋಧ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ‌ ನಡೆಯಿತು.

ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿ, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು‌. ಈ ಕುರಿತು ಮಾತನಾಡಿದ ವಾಟಾಳ್ ನಾಗರಾಜ್ ಅವರು, ಗಡಿಯಲ್ಲಿರುವ ತಮಿಳು, ಹಿಂದಿ ಬೋರ್ಡ್ ತೆಗೆಯಬೇಕು. ಬ್ಯಾಂಕ್​ಗಳಲ್ಲಿ ಕನ್ನಡದ ಚಲನ್ ನೀಡಬೇಕು, ಬ್ಯಾಂಕ್​ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.