ETV Bharat / state

ವರ್ತೂರು ಪ್ರಕಾಶ್ ಕಿಡ್ನ್ಯಾಪ್​ ಕೇಸ್​ : ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ - Former minister Vartur Prakash

ಹಣಕ್ಕಾಗಿ ನುರಿತ ತಂಡದಿಂದಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ‌..

ds
ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ
author img

By

Published : Dec 5, 2020, 10:07 AM IST

ಕೋಲಾರ : ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು‌ ಮೂಲದ ಓರ್ವ ಬೌನ್ಸರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಬ್ಬನನ್ನ ಗುಪ್ತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ 13 ಜನರನ್ನ ವಿಚಾರಣೆ ನಡೆಸಿರುವ‌ ಪೊಲೀಸರು, ಇನ್ನೆರಡು ದಿನದಲ್ಲಿ ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಓದಿ: ವರ್ತೂರು ಪ್ರಕಾಶ್​ರನ್ನು ಅಪಹರಿಸಿದ್ದವರು ನಮ್ಮ ರಾಜ್ಯದವರೇ: ಎಸ್​ಪಿ ಕಾರ್ತಿಕ್ ರೆಡ್ಡಿ

ಅಪಹರಣದ ಸುತ್ತ ಹಲವಾರು ಅನುಮಾನಗಳು ಕಾಡ್ತಿವೆ. ಫಾರಂ‌ ಹೌಸ್​ನ ಸಿಬ್ಬಂದಿಯೊಬ್ಬ ನಾಪತ್ತೆಯಾಗಿದ್ದಾನೆ. ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವತಿಯಿಂದ ನಾಲ್ಕು ತಂಡ ರಚನೆಯಾಗಿದ್ದು, ಒಂದು ತಂಡ ಮಹಾರಾಷ್ಟ್ರದ ಪುಣೆಗೆ ಮತ್ತು ಮತ್ತೊಂದು ತಂಡ ಆಂಧ್ರಕ್ಕೆ ತೆರಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.