ಕೋಲಾರ: ಅಪಹರಣ ಪ್ರಕರಣವನ್ನ ಸುಖಾಂತ್ಯಗೊಳಿಸಿದ ಪೊಲೀಸ್ ಸಿಬ್ಬಂದಿಗೆ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಹೂಗುಚ್ಚ, ಸಿಹಿ ನೀಡುವುದರ ಮೂಲಕ ಅಭಿನಂದನೆಗಳನ್ನ ಸಲ್ಲಿಸಿದರು.
ಇಂದು ಕೋಲಾರದ ಎಸ್ಪಿ ಕಚೇರಿಗೆ ಭೇಟಿ ನೀಡಿ ಎಸ್ಪಿ ಕಾರ್ತಿಕ್ ರೆಡ್ಡಿ ಅವರಿಗೆ ಹೂಗುಚ್ಚ ನೀಡಿ ಕೃತಜ್ಞನೆಗಳನ್ನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಿಡ್ನಾಪ್ ಪ್ರಕರಣವನ್ನ ಭೇದಿಸಲು ಪೊಲೀಸ್ ವರಿಷ್ಠಾಧಿಕಾರಿಗಳು, ಐದು ತಂಡಗಳನ್ನ ಮಾಡಿ, ಆಂಧ್ರಪ್ರದೇಶ, ಚೆನ್ನೈ, ಹೊಸೂರು ಸೇರಿದಂತೆ ಇನ್ನಿತರ ಕಡೆ ಸಿನಿಮೀಯ ರೀತಿಯಲ್ಲಿ ಭೇಟೆಯಾಡಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಓದಿ-ಸಿದ್ದರಾಮಯ್ಯ ಅಹಂಕಾರದಿಂದಲೇ ಕಾಂಗ್ರೆಸ್ ವಿಪಕ್ಷದಲ್ಲಿದೆ: ಸಿ.ಸಿ.ಪಾಟೀಲ್
ಕೋಲಾರ ಜಿಲ್ಲೆಯ ಎಸ್ಪಿ ಸೇರಿದಂತೆ ಎಲ್ಲ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದರು. ಅಲ್ಲದೇ ಹಗಲು - ರಾತ್ರಿ ಕಾರ್ಯಾಚರಣೆ ನಡೆಸಿ ದಕ್ಷ ಪ್ರಮಾಣಿಕತೆಗೆ ಹೆಸರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.