ಕೋಲಾರ: ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ತಿಳಿಸಿದ್ದಾರೆ.
ಎಫ್. ಬ್ಲಾಕ್ ನಿವಾಸಿ ರಾಜೇಶ್ (38), ಮಾರಿಕುಪ್ಪಂ ಸಾಮಿಲ್ ಲೈನಿನ ನಿವಾಸಿ ಸಚಿನ್ ಸುಧಾಕರ್ (25) ಬಂಧಿತ ಆರೋಪಿಗಳು. ಕೆಜಿಎಫ್ ತಾಲೂಕಿನ ಆಂಡ್ರಸನ್‍ಪೇಟೆ ಠಾಣೆಯ ಕಾನ್ಸ್ಟೇಬಲ್ ಅಶೋಕ್, ಚಾಮರಾಜಪೇಟೆಯ ವೃತ್ತದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ತಡೆದು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ನಲ್ಲಿ ಬಂದ ಆರೋಪಿಗಳು, ಏಕಾಏಕಿ ಕಾನ್ಸ್ಟೇಬಲ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು.
ಘಟನೆ ನಡೆದ 24 ಗಂಟೆಗಳಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಓದಿ: ಒಂದೇ ದಿನ 6 ಮಂದಿ ಕೋವಿಡ್ಗೆ ಬಲಿ : ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾದ ಯುವಕ