ಕೋಲಾರ: ಜಿಲ್ಲೆಯಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಪ್ರಾಣಿ ಸಂಕುಲ ಅನ್ನ ನೀರು ಸಿಗದೆ ಕಂಡ ಕಂಡಲ್ಲಿ ಧಾರುಣವಾಗಿ ಸಾವನ್ನಪ್ಪುತ್ತಿವೆ. ಇತ್ತೀಚೆಗಷ್ಟೇ 6 ಜಿಂಕೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ರೆ, ಇತ್ತಾ ನೀರಿಲ್ಲದೆ ವಾನರ ಸೈನ್ಯದ ಸರಣಿ ಸಾವು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಹೌದು, ಜಿಲ್ಲೆಯಲ್ಲಿ ಬರದ ಭೀಕರತೆ ಮಿತಿ ಮೀರಿದ್ದು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಇದೆ, ಆಹಾರ, ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಜಿಂಕೆಗಳು ಸಾವನ್ನಪ್ಪುತ್ತಿದ್ರೆ, ಕಾಡಿನಲ್ಲಿ ಆಹಾರ ಸಿಗದೆ ಸುಮಾರು 20ಕ್ಕೂ ಹೆಚ್ಚು ಕೋತಿಗಳು ಸರಣಿ ಸಾವನ್ನಪ್ಪುತ್ತಿವೆ. ಕಾಡು ಪ್ರಾಣಿಗಳಿಗೆ ಬೇಕಾದ ಸೌಲಭ್ಯಗಳನ್ನ ಕಲ್ಪಿಸುವಲ್ಲಿ ಹಾಗೂ ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ.
ಕೋಲಾರ ತಾಲೂಕು ಆನೇಪುರ ಗ್ರಾಮದ ಬಳಿ ವಕ್ಕಲೇರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಆರು ಜಿಂಕೆಗಳು ಒಂದೇ ಭಾಗದಲ್ಲಿ ಮೃತಪಟ್ಟಿದ್ದವು. ಅದು ವಿಷಾಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿನ ಕೋತಿಗಳು ಸರಣಿ ಸಾವನ್ನಪ್ಪುತ್ತಿವೆ. ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ, ಜಿಂಕೆಗಳು ಮೃತಪಡುತ್ತಿವೆ ಅನ್ನೋದು ಇಲ್ಲಿನ ಸ್ಥಳೀಯರ ಆರೋಪವಾಗಿದೆ.
ಇನ್ನು ಮೇಲ್ನೋಟಕ್ಕೆ ಕೋತಿಗಳ ಸಾವಿಗೆ ವಿಪರೀತ ಬಿಸಿಲು ಅತಿಯಾದ ತಾಪಮಾನ ಹಾಗೂ ಅನ್ನ ನೀರಿಲ್ಲದೆ ಹಸಿವಿನಿಂದ ಅಸ್ವಸ್ಥವಾಗಿ ಸಾವನ್ನಪ್ಪಿವೆ ಎನ್ನಲಾಗುತ್ತಿದೆ. ಹೀಗೆ ಕಳೆದ ಕೆಲವು ದಿನಗಳಿಂದ ಕೋತಿಗಳ ಸಾವನ್ನಪ್ಪುತ್ತಿದ್ರು. ಯಾವೊಬ್ಬ ಅದಿಕಾರಿಯೂ ಇತ್ತ ತಲೆ ಹಾಕಿರಲಿಲ್ಲ. ನಂತರ ಸ್ಥಳೀಯರು ಅಧಿಕಾರಿಗಳಿಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡ ಮೇಲೆ ಅರಣ್ಯ ಇಲಾಖೆಯವರು, ಪಶುವೈಧ್ಯರು, ಹಾಗೂ ಆರೋಗ್ಯ ಇಲಾಖೆ ಅದಿಕಾರಿಗಳು ಭೇಟಿ ನೀಡಿ ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಕೆಲವು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.