ETV Bharat / state

SSLC ವಿದ್ಯಾರ್ಥಿನಿಗೆ ಕೊರೊನಾ: ನಾಳೆ ಪರೀಕ್ಷೆ ಬರೆಯುವುದಕ್ಕೆ ಜಿಲ್ಲಾಡಳಿತದಿಂದ ತಡೆ - ಎಸ್​ಎಸ್​​ಎಲ್​​ಸಿ ವಿದ್ಯಾರ್ಥಿನಿಗೆ ಕೊರೊನಾ ಸುದ್ದಿ

ನಾಳೆ SSLC ಪರೀಕ್ಷೆಗೆ ಹಾಜರಾಗಬೇಕಿದ್ದ ಕೋಲಾರ ಜಿಲ್ಲೆಯ ವಿದ್ಯಾರ್ಥಿನಿಯೋರ್ವಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಪರೀಕ್ಷೆ ಬರೆಯುವುದನ್ನು ತಡೆ ಹಿಡಿಯಲಾಗಿದೆ. ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

positive
ವಿದ್ಯಾರ್ಥಿನಿಗೆ ಕೊರೊನಾ
author img

By

Published : Jun 24, 2020, 5:40 PM IST

ಕೋಲಾರ: ನಾಳೆ ಎಸ್​ಎಸ್​​ಎಲ್​​ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ವ್ಯಾಪ್ತಿಯ SSLC ವಿದ್ಯಾರ್ಥಿನಿಯೋರ್ವಳಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಈ ಬಾರಿಯ ಎಸ್​ಎಸ್​​ಎಲ್​​ಸಿ ಪರೀಕ್ಷೆ ಬರೆಯುವುದಕ್ಕೆ ತಡೆ ನೀಡಲಾಗಿದೆ. ಇನ್ನು ಈಕೆಯನ್ನು ಬಾಲ್ಯ ವಿವಾಹದ ಅರೋಪದಡಿ ಕಳೆದ ಶನಿವಾರ ಬಾಲ ಮಂದಿರದಲ್ಲಿ ಇಡಲಾಗಿತ್ತು. ಈ ವೇಳೆ ಬಾಲಕಿಯ ಗಂಟಲು ದ್ರವ‌ ಮಾದರಿ ಟೆಸ್ಟ್ ಮಾಡಲಾಗಿತ್ತು. ಜೊತೆಗೆ ನಾಳೆ ಎಸ್​ಎಸ್​​ಎಲ್​​ಸಿ ಪರೀಕ್ಷೆ ಇದ್ದ ಹಿನ್ನೆಲೆ ಬಾಲಕಿಯ ಪೋಷಕರು ಬಾಲ ಮಂದಿರದಿಂದ ಆಕೆಯನ್ನ ಮನೆಗೆ ವಾಪಸ್​​ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಇಂದು ಬಂದ ಲ್ಯಾಬ್​ ವರದಿಯಲ್ಲಿ ಬಾಲಕಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಹಿನ್ನೆಲೆ ನಾಳೆ ಪರೀಕ್ಷೆ ಬರೆಯಲು ಅವಕಾಶ ನೀಡದೆ‌, ಪೂರಕ ಪರೀಕ್ಷೆಯಲ್ಲಿ ಅವಕಾಶ‌ ನೀಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.