ಕೋಲಾರ: ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಮಾಜಿ ಯೋಧರ ಸ್ಮಾರಕ ನಿರ್ಮಾಣಕ್ಕೆ ಕಾರ್ಗಿಲ್ ವೀರ ಭೂಮಿಯಿಂದ ಮಣ್ಣನ್ನು ತರಲಾಗುತ್ತಿದೆ.
ಈ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರು ಚಾಲನೆ ನೀಡಿದ್ದರು.
ಕೋಲಾರದ ಪಿಸಿ.ಬಡಾವಣೆಯ ಮಕ್ಕಳ ಉದ್ಯಾನವನದ ಬಳಿ ಸ್ಮಾರಕ ನಿರ್ಮಾಣವಾಗುತ್ತಿದ್ದು, ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರು ಮಣ್ಣನ್ನು ತರುತ್ತಿದ್ದಾರೆ. ಕರ್ನಲ್ ಅವರು ಅಲ್ಲಿನ ಮಣ್ಣನ್ನು ಒಂದು ಕವರ್ನಲ್ಲಿ ತುಂಬಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.