ETV Bharat / state

ಕೋಲಾರ: ಸೆಕ್ಯುರಿಟಿ ಗಾರ್ಡ್ ಕೊಲೆ, ಹತ್ಯೆ ಹಿಂದೆ ಅನುಮಾನದ ಹುತ್ತ - ಮುಳಬಾಗಿಲು ಗ್ರಾಮಾಂತರ ಪೊಲೀಸರು

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿ ಬಳಿ ಸೆಕ್ಯುರಿಟಿ ಗಾರ್ಡ್​ವೋರ್ವರ ಕೊಲೆ ಆಗಿದೆ.

ಮಂಜುನಾಥ್
ಮಂಜುನಾಥ್
author img

By ETV Bharat Karnataka Team

Published : Nov 26, 2023, 5:31 PM IST

ಮೊದಲ ಪತ್ನಿ ಸೌಭಾಗ್ಯಮ್ಮ ಕೊಲೆ ಬಗ್ಗೆ ಮಾತನಾಡಿದ್ದಾರೆ

ಕೋಲಾರ : ಹಳೆ ದ್ವೇಷದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಸೆಕ್ಯುರಿಟಿ ಗಾರ್ಡ್‌ವೋರ್ವನನ್ನು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿ ಬಳಿ ಶನಿವಾರ ರಾತ್ರಿ ಈ ಪ್ರಕರಣ ನಡೆದಿದೆ. ಮಿಣಜೇನಹಳ್ಳಿಯ ಮಂಜುನಾಥ್ (48) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತ ಬಂಗಾರಪೇಟೆ ತಾಲೂಕಿನ ಮಾದಮುತ್ತನಹಳ್ಳಿ ಗ್ರಾಮದ ಶ್ರೀನಿವಾಸ್​ನೊಂದಿಗೆ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಎರಡು ಮೂರು ಬಾರಿ ನ್ಯಾಯ ಪಂಚಾಯಿತಿ ಮಾಡಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ಕಳೆದ ರಾತ್ರಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇನ್ನು ಮಂಜುನಾಥ್ ಎರಡನೇ ಪತ್ನಿ ನೇತ್ರಾ ಅಕ್ರಮ ಸಂಬಂಧವೂ ಕೊಲೆಯ ಹಿಂದೆ ತಳುಕ ಹಾಕಿಕೊಂಡಿದೆ. ಈ ಹಿನ್ನೆಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಮಂಜುನಾಥ್ ತನ್ನ ಮೊದಲ ಪತ್ನಿ ಸೌಭಾಗ್ಯಮ್ಮ ಎಂಬುವರಿಂದ ದೂರವಿದ್ದು, 2 ನೇ ಪತ್ನಿ ನೇತ್ರಾಳೊಂದಿಗೆ ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. 2ನೇ ಪತ್ನಿ ನೇತ್ರಾ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ ಅನ್ನೋದು ಮೊದಲ ಪತ್ನಿ ಸೌಭಾಗ್ಯಮ್ಮ ಅವರ ಆರೋಪವಾಗಿದೆ.

ಇನ್ನು ಕೊಲೆ ನಡೆದಿದ್ರು, ಆಕೆ ಸ್ಥಳಕ್ಕೆ ಬಂದಿಲ್ಲ. ಜೊತೆಗೆ ಆಕೆಯಿಂದಲೇ ಕೊಲೆಯಾಗಿದೆ ಅನ್ನೋದು ಸಂಬಂಧಿಕರ ಆರೋಪವೂ ಕೂಡ ಹೌದು. ಆದ್ರೆ 40 ಸಾವಿರ ಹಣಕ್ಕಾಗಿ ಇಬ್ಬರ ಮಧ್ಯೆ ಪದೇ ಪದೆ ಜಗಳ ನಡೆಯುತ್ತಿತ್ತು. ಪರಿಣಾಮ ಕಳೆದ ರಾತ್ರಿ ಶ್ರೀನಿವಾಸ್ ಕೊಲೆ ಮಾಡಿದ್ದಾನೆ ಅನ್ನೋದು ಮೃತನ ಮಾವ ನಾಗರಾಜ್ ಆರೋಪ. ಇನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಸದ್ಯ ಶಂಕಿತ ಕೊಲೆ ಆರೋಪಿ ಶ್ರೀನಿವಾಸ್‌ ಎಂಬಾತನನ್ನು ವಶಕ್ಕೆ ಪಡೆದು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆ ಕೈಗೊಂಡಿದ್ದಾರೆ.

ವ್ಯಕ್ತಿಯನ್ನು ಹತ್ಯೆಗೈದು ಯುವಕ ಪರಾರಿ : ಬೆಂಗಳೂರಿನ ಆನೇಕಲ್-ಹೊಸೂರು ಮುಖ್ಯ ರಸ್ತೆಯ ಸಮಂದೂರು ಗೇಟ್ ಬಳಿ (ನವೆಂಬರ್ -14-2023) ಕೊಲೆಯೊಂದು ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದರು. ತನ್ನ ತಾಯಿಯನ್ನು ಎಂಟು ವರ್ಷಗಳ‌ ಹಿಂದೆ ಕೊಲೆ ಮಾಡಿದ ವ್ಯಕ್ತಿಯನ್ನು ಯುವಕನೋರ್ವ ಕಲ್ಲು ಎತ್ತಿ ಹಾಕಿ ಕೊಲೆ‌ ಮಾಡಿರುವ ಘಟನೆ ನಡೆದಿತ್ತು.

ಇದನ್ನೂ ಓದಿ : ಬೆಂಗಳೂರು: ತಾಯಿಯನ್ನು ಕೊಲೆ ಮಾಡಿದ್ದಕ್ಕೆ ದ್ವೇಷ; ವ್ಯಕ್ತಿಯನ್ನು ಹತ್ಯೆಗೈದು ಯುವಕ ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.