ಕೋಲಾರ: ನಗರದಲ್ಲಿಂದು ಕಾರ್ಯಾಚರಣೆ ನಡೆಸಿರುವ ಆರ್‌ಟಿಒ ಅಧಿಕಾರಿಗಳು ಪರವಾನಗಿ ಉಲ್ಲಂಘಿಸಿ ಸಂಚರಿಸುತ್ತಿದ್ದ 7 ಖಾಸಗಿ ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಶಾಲಾ ಮಕ್ಕಳನ್ನು ಕರೆದೊಯ್ಯಲು ಪರವಾನಗಿ ಪಡೆದುಕೊಂಡು ಖಾಸಗಿ ಕಂಪನಿಯ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ 7 ಬಸ್‌ಗಳು ಪರವಾನಗಿ ಉಲ್ಲಂಘನೆ ಹಾಗೂ ಟ್ಯಾಕ್ಸ್ ಲಾಪ್ಸ್ ಆಗಿದ್ದರು ಅದನ್ನು ನವೀಕರಣ ಮಾಡಿಕೊಳ್ಳದ ಬಸ್‌ಗಳು ಮುಳಬಾಗಿಲು, ಬಂಗಾಪೇಟೆ, ಮಾಲೂರು ಕಡೆಯಿಂದ ಖಾಸಗಿ ಕಂಪನಿಯ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದವು. ಈ ವೇಳೆ, ಬಸ್‌ಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಪರವಾನಗಿ ಉಲ್ಲಂಘನೆಯಾಗಿರುವುದು ಪತ್ತೆಯಾಗಿದೆ.
ಈ ಸಂಬಂಧ ಏಳು ಬಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಎಲ್ಲ ಬಸ್‌ಗಳು ಸಂತೋಷ್ ಟ್ರಾವೆಲ್ಸ್‌ಗೆ ಸೇರಿರುವ ಬಸ್‌ಗಳಾಗಿದ್ದು, ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆರ್‌ಟಿಒ ಇನ್ಸ್‌ಪೆಕ್ಟರ್ ಸುರೇಶ್ ಗೌಡ, ಸುದೀಂದ್ರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.
ಇನ್ನೂ ಕೆಲವು ಖಾಸಗಿ ಬಸ್‌ಗಳು ಪರವಾನಗಿ ಪಡೆದಿರುವ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಗ್ಗೆಯೂ ಈಗಾಗಲೇ ಮಾಹಿತಿ ಬಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೂ ಕಡಿವಾಣ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.