ETV Bharat / state

ಅಧಿಕಾರಿಗಳ ವಿರುದ್ಧ ಮುನಿದ ಮುನಿಸ್ವಾಮಿ : ಕೆಡಿಪಿ ಸಭೆಯಲ್ಲಿ ಸಂಸದರು ಫುಲ್​ ಗರಂ

ಜಿಲ್ಲೆಯಲ್ಲಿ ಸಹಕಾರ‌ ಇಲಾಖೆಯಲ್ಲಿ ಯಾರದ್ದೋ ಗುಲಾಮರಾಗಬೇಡಿ, ಹೀರೋ ತರ ರಿಟೈರ್ಡ್​ ಆಗಿ ಮನೆಗೆ ಹೋಗಿ, ವಿಲನ್ ಆಗಬೇಡಿ ಎಂದು ಖಡಕ್ ಆಗಿ ಎಚ್ಚರಿಕೆ‌ ನೀಡಿದರು. ನಿಮ್ಮಷ್ಟ ಬಂದವರಿಗೆ ಮಾತ್ರ ಸಾಲ ಕೊಡ್ತೀರಾ, ಸಹಕಾರ ಸಂಘದ ಸದಸ್ಯರ ಮತಗಳನ್ನು ಅನೂರ್ಜಿತ ಮಾಡಿದ್ದೀರಾ, ನಿಮಗೆ ಬೇಕಾದವರು ಹೇಳಿದ್ದಾರೆಂದು ಸದಸ್ಯರ ಮತಗಳೇ ಇಲ್ಲದಂತೆ ಮಾಡಿದ್ದೀರಾ..

mp s muniswamy outrage on officers
ಅಧಿಕಾರಿಗಳ ವಿರುದ್ಧ ಸಂಸದರು ಗರಂ
author img

By

Published : Jan 8, 2021, 7:33 PM IST

ಕೋಲಾರ : ಸಹಕಾರ ಇಲಾಖೆಯ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆ ಗಾಳಿಗೆ ತೂರಲಾಗುತ್ತಿದೆ ಎಂದು ಅಧಿಕಾರಿಯನ್ನು ಸಂಸದ ಎಸ್ ಮುನಿಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳ ವಿರುದ್ಧ ಸಂಸದರು ಗರಂ..

ಕೋಲಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮಕ್ಕೆ ಯಾರನ್ನು ಕರೆಯದೆ ರಾಜಕೀಯ ಮಾಡ್ತಿದ್ದಾರೆ ಎಂದು ಅಧಿಕಾರಿಯ ವಿರುದ್ಧ ಸಂಸದ ಮುನಿಸ್ವಾಮಿ ಕಿಡಿಕಾರಿದ್ರು.

ಜಿಲ್ಲೆಯಲ್ಲಿ ಸಹಕಾರ‌ ಇಲಾಖೆಯಲ್ಲಿ ಯಾರದ್ದೋ ಗುಲಾಮರಾಗಬೇಡಿ, ಹೀರೋ ತರ ರಿಟೈರ್ಡ್​ ಆಗಿ ಮನೆಗೆ ಹೋಗಿ, ವಿಲನ್ ಆಗಬೇಡಿ ಎಂದು ಖಡಕ್ ಆಗಿ ಎಚ್ಚರಿಕೆ‌ ನೀಡಿದರು. ನಿಮ್ಮಷ್ಟ ಬಂದವರಿಗೆ ಮಾತ್ರ ಸಾಲ ಕೊಡ್ತೀರಾ, ಸಹಕಾರ ಸಂಘದ ಸದಸ್ಯರ ಮತಗಳನ್ನು ಅನೂರ್ಜಿತ ಮಾಡಿದ್ದೀರಾ, ನಿಮಗೆ ಬೇಕಾದವರು ಹೇಳಿದ್ದಾರೆಂದು ಸದಸ್ಯರ ಮತಗಳೇ ಇಲ್ಲದಂತೆ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಕೋಲಾರದಲ್ಲಿ ಸಹಕಾರ ಸಂಘದ ಹಸ್ತಲಾಘವ ಚಿಹ್ನೆ ಬೇರೊಂದು ರೀತಿಯಲ್ಲಿದೆ. ಯಾರದ್ದೋ ಮಾತು ಕೇಳಿದ್ರೆ ಕಂಬಿ ಎಣಿಸುತ್ತೀರಾ ಎಂದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ನೀಲಪ್ಪನವರ್​ಗೆ ವಾರ್ನಿಂಗ್​ ಕೊಟ್ರು. ಸಂಸದ ಮುನಿಸ್ವಾಮಿ ಮಾತಿಗೆ ಎಮ್​ಎಲ್​ಸಿ ಗೋವಿಂದರಾಜು, ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯ ಸಿ ಎಸ್ ವೆಂಕಟೇಶ್ ಸಾಥ್ ನೀಡಿದ್ರು.

ಇದನ್ನೂ ಓದಿ:ಭಾನುವಾರ ಹಸಿರು ಮಾರ್ಗದಲ್ಲಿ ಬೆಳಗ್ಗೆ 2 ತಾಸು ಮೆಟ್ರೋ ಸಂಚಾರ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.