ಕೋಲಾರ: ಜಿಲ್ಲೆ ಗ್ರೀನ್ಝೋನ್ನಲ್ಲಿರುವ ಹಿನ್ನೆಲೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಕೂಡ ಮಟನ್ ಮಾರುಕಟ್ಟೆ ಬಂದ್ ಮಾಡಲಾಗಿದೆ. ಬಸವ ಜಯಂತಿ ಹಿನ್ನೆಲೆ ಜಿಲ್ಲೆಯಾದ್ಯಂತ ಮಟನ್, ಚಿಕನ್ ಹಾಗೂ ಮೀನು ಮಾರಾಟ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಲಾಕ್ಡೌನ್ ಇದ್ದರೂ ಸಹ ಕಳೆದ ಒಂದು ತಿಂಗಳಿನಿಂದ ಕೋಲಾರದಲ್ಲಿ ಎಂದಿನಂತೆ ಕೆಲ ನಿರ್ಬಂಧನೆಗಳ ಮೂಲಕ ಮಾಂಸದಂಗಡಿಗಳು ನಡೆಯುತ್ತಿದ್ದವು. ಇದೀಗ ಕೋಲಾರ ಗ್ರೀನ್ ಜೋನ್ ಆಗಿದ್ದು, ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಕೂಡ ಬಸವ ಜಯಂತಿ ಹಿನ್ನೆಲೆ ಅಂಗಡಿಗಳನ್ನು ಮುಚ್ಚಲಾಗಿದೆ. ಹಾಗಾಗಿ ಮಾಂಸ ಖರೀದಿಗೆ ಆಗಮಿಸಿದ ಕೆಲವರು ವಾಪಸ್ ಹೋಗಿದ್ದಾರೆ.