ETV Bharat / state

ಕೋಲಾರ: ಲಾರಿ ದರೋಡೆ ಮಾಡಿ ಹಣ ದೋಚಿದ್ದ ಐವರು ಆರೋಪಿಗಳ ಬಂಧನ - Lorry robbery accused arrested

ಜೂನ್​ 18ರಂದು ತಮಿಳುನಾಡಿಗೆ ಹೋಗುತ್ತಿದ್ದ ಲಾರಿ ತಡೆದು ಚಾಲಕನಿಗೆ ಹಲ್ಲೆ ಮಾಡಿ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Police and arrested accused
ಬಂಧಿತ ಆರೋಪಿಗಳೊಂದಿಗೆ ಪೊಲೀಸರು
author img

By

Published : Jul 25, 2022, 9:46 AM IST

ಕೋಲಾರ: ಲಾರಿ ತಡೆದು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಕಾಮಸಮುದ್ರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜೂನ್​ 18ರಂದು ಬಂಗಾರಪೇಟೆಯಿಂದ ತಮಿಳುನಾಡಿಗೆ ಹೋಗುತ್ತಿದ್ದ ಲಾರಿ ತಡೆದು ಚಾಲಕ ರಾಮಕೃಷ್ಣ ಎಂಬುವನ​ ಮೇಲೆ ಹಲ್ಲೆ ಮಾಡಿ 4.34 ಲಕ್ಷ ರೂಪಾಯಿ ನಗದು ದರೋಡೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ತಮಿಳುನಾಡು ಮೂಲದ ನಾಗೇಶ್​ (25), ಸೈಯ್ಯದ್​ ಪಾಷಾ (27), ಜಬೀಉಲ್ಲಾ (25) ಸದ್ದಾಂಹಸೇನ್​(23), ಚಿನ್ನಸ್ವಾಮಿ(29) ಎಂಬವರನ್ನು ಬಂಧಿಸಿದ್ದಾರೆ.

ಇವರೊಂದಿಗಿದ್ದ ಮತ್ತಿಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಟೊಯೋಟೊ ಕಾರ್​ನಲ್ಲಿ ಬಂದು ಕೃತ್ಯ ಎಸಗಿದ್ದ ಆರೋಪಿಗಳಿಂದ ಒಂದು ಕಾರು, ಎರಡು ಬೈಕ್​, ಐದು ಮೊಬೈಲ್​, 4.34 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಲಾರಿ ಟೈರ್‌ಗಳೇ ಟಾರ್ಗೆಟ್.. ಆರು ತಿಂಗಳಲ್ಲಿ ಮೂರು ಬಾರಿ ಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.