ಕೋಲಾರ: ವಾಲಿಬಾಲ್ ಆಟದ ವಿಚಾರಕ್ಕೆ ಗಲಾಟೆ ಉಂಟಾಗಿ ಮೂವರಿಗೆ ಚಾಕು ಇರಿದಿರುವ ಘಟನೆ ತಾಲೂಕಿನ ಕೆ.ಬಿ. ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಾಲಿವಾಲ್ ಕೋರ್ಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಒಂದು ಗುಂಪು ಖಾರದ ಪುಡಿ ಎರಚಿ ಮೂವರಿಗೆ ಚಾಕುವಿನಿಂದ ಇರಿದಿದೆ.
ಮಂಜುನಾಥ್ (38), ಅಮರೇಶ್ (28), ಮಣಿ (24) ಚಾಕು ಇರಿತಕ್ಕೊಳಗಾದವರು. ವಿನೋದ್, ಮಂಜುನಾಥ್, ಮುನಿಯಪ್ಪ, ರಾಜಣ್ಣ, ಮುತ್ತು ಹಲ್ಲೆ ಮಾಡಿದ ಆರೋಪಿಗಳು. ಇನ್ನು ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಮೂವರ ಬೆನ್ನು, ಹೊಟ್ಟೆ ಹಾಗೂ ಕಿಡ್ನಿ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.