ಕೋಲಾರ: ಕೊರೊನಾ ಹಿನ್ನೆಲೆ ಈ ವರ್ಷ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಇಲ್ಲ. ಆದಕ್ಕಾಗಿ ಸರ್ಕಾರ ನಿಷೇಧಾಜ್ಞೆಯೂ ಜಾರಿ ಮಾಡಿದೆ. ಆದ್ರೆ, ಅಬಕಾರಿ ಇಲಾಖೆ ನಿಷೇಧಾಜ್ಞೆ ನಡುವೆಯೂ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.
ಈ ಕುರಿತು ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಮಾತನಾಡಿ, ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಗಾಗಿ ಮಧ್ಯರಾತ್ರಿ 1 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾರ್, ವೈನ್ ಶಾಪ್, ಕ್ಲಬ್ಗಳು 1 ಗಂಟೆಯವರೆಗೂ ತೆರೆಯಲಿವೆ. ಆದ್ರೆ, ಬೆಂಗಳೂರು ಹೊರತುಪಡಿಸಿ ಉಳಿದೆಡೆ ಮಧ್ಯರಾತ್ರಿ 12.30 ಗಂಟೆಗೆ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದರು.
ಮೊದಲೇ ಬುಕ್ಕಿಂಗ್ ಮಾಡಿಕೊಂಡಿರುವವರು ಕ್ಲಬ್‌ಗಳಿಗೆ ಹೋಗಬಹುದು. 5 ಜನಕ್ಕಿಂತ ಹೆಚ್ಚಿನ ಜನ ಒಂದೆಡೆ ಸೇರಬೇಡಿ ಅಂತ ಮನವಿ ಮಾಡಲಾಗಿದೆ. ಹೋಟೆಲ್ ಹಾಗೂ ಕ್ಲಬ್ಗಳಲ್ಲಿ ಶೇ 50ರಷ್ಟು ಮಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ನಿಯಮ ಮೀರಿದರೆ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷಾಚರಣೆ ಹಿನ್ನೆಲೆ ಅಬಕಾರಿ ಇಲಾಖೆಗೆ 20 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ ಎಂದರು.
ಇದನ್ನೂ ಓದಿ: ಹೇಮಂತ್ ನಿಂಬಾಳ್ಕರ್, ರೂಪಾ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ!