ಕೋಲಾರ: ನಾಟಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆವಲಕುಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾರಾಯಣಸ್ವಾಮಿ ಹಾಗೂ ಭಾಗ್ಯಮ್ಮ ಎಂಬ ದಂಪತಿಗೆ ಸೇರಿದ ನಾಟಿ ಹಸು ಇದಾಗಿದೆ. ಇದುವರೆಗೂ ಮೂರು ಬಾರಿ ಕರುಗಳಿಗೆ ಜನ್ಮ ನೀಡಿದ್ದ ಹಸು, ಪ್ರತಿ ಬಾರಿಯೂ ಒಂದೊಂದು ಕರುವಿಗೆ ಜನ್ಮ ನೀಡಿತ್ತು. ಇದೀಗ ಮೂರು ಕರುಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.
![A cow that gave birth to three calves at one time](https://etvbharatimages.akamaized.net/etvbharat/prod-images/kn-klr-naati-hasu-av-ka10049_10032021184110_1003f_1615381870_431.jpg)
ನಾಲ್ಕನೇ ಬಾರಿಗೆ ಎರಡು ಹೆಣ್ಣು ಕರು ಹಾಗೂ ಒಂದು ಗಂಡು ಕರುವಿಗೆ ಜನ್ಮ ನೀಡಿದೆ. ಇದರಿಂದಾಗಿ ನಾಟಿ ಹಸುವಿನ ಮಾಲೀಕರು ಖುಷಿಯಾಗಿದ್ದಾರೆ. ಸ್ಥಳಕ್ಕೆ ಪಸು ವೈದ್ಯ ವೆಂಕಟೇಶ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: ಮಹಿಳೆ ಮುಖಕ್ಕೆ ಪಂಚ್ ಮಾಡಿದ ಜೊಮ್ಯಾಟೊ ಪುಡ್ ಡೆಲಿವರಿ ಬಾಯ್ ಅರೆಸ್ಟ್