ETV Bharat / state

ಕೋಲಾರದಲ್ಲಿ ಕೋವಿಡ್​​​​ ಭೀತಿ: ಚಿಕ್ಕ ತಿರುಪತಿಯಲ್ಲಿ ಭಕ್ತರ ಪ್ರವೇಶಕ್ಕೆ ಕೊಂಚ ಬ್ರೇಕ್​​...! - ಆಷಾಡ ಮಾಸ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿರುವ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ವೈರಸ್​ ಭೀತಿಯಿಂದ ಭಕ್ತರ ಪ್ರವೇಶಕ್ಕೆ ‌ಕಡಿವಾಣ ಹಾಕಲಾಗಿದೆ.

chikka-tirupati-temple-close-for-two-days
ಚಿಕ್ಕ ತಿರುಪತಿಯಲ್ಲಿ ಭಕ್ತರ ಪ್ರವೇಶಕ್ಕೆ ಬ್ರೇಕ್​​
author img

By

Published : Jul 3, 2020, 1:38 PM IST

ಕೋಲಾರ : ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಚಿಕ್ಕ ತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಎರಡು ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ.

ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ

ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿರುವ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ವೈರಸ್​ ಭೀತಿಯಿಂದ ಭಕ್ತರ ಪ್ರವೇಶಕ್ಕೆ ‌ ಕಡಿವಾಣ ಹಾಕಲಾಗಿದ್ದು, ಶನಿವಾರ ಹಾಗೂ ಭಾನುವಾರ ರಜೆ ದಿನಗಳಾಗಿರುವುದರಿಂದ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಜಿಲ್ಲಾಡಳಿತ ಈ ಸೂಚನೆ ನೀಡಿದೆ.

Chikka Tirupati Temple close for two days
ಜಿಲ್ಲಾಡಳಿತ ಸೂಚನೆ

ಅಲ್ಲದೇ ಈಗಾಗಲೇ ಆಷಾಡ ಮಾಸ ಪ್ರಾರಂಭವಾಗಿರುವುದರಿಂದ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಬರುವ ಭಕ್ತಾಧಿಗಳ‌ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಕೊರೊನಾ ಸೊಂಕು ಹೆಚ್ಚಾಗುವ ಭೀತಿಯಿದೆ. ಹೀಗಾಗಿ ಚಿಕ್ಕ ತಿರುಪತಿ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದ ಜನತೆಯ ಮನವಿ ಮೇರೆಗೆ ಎರಡು ದಿನಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.