ETV Bharat / state

ಎರಡು ದಿನದಲ್ಲಿ ಕಣ್ಮರೆಯಾದವರ ಶೋಧ ಕಾರ್ಯ ಮುಗಿಸಿ: ಅಧಿಕಾರಿಗಳಿಗೆ ಸಚಿವರ ಡೆಡ್​ಲೈನ್​

ಬ್ರಹ್ಮಗಿರಿ ಬೆಟ್ಟ ಕುಸಿತವಾಗಿ ಕಣ್ಮರೆಯಾಗಿರುವ ನಾಲ್ವರನ್ನು ಎರಡು ದಿನಗಳಲ್ಲಿ ಹುಡುಕುವ ಕೆಲಸ ಮುಗಿಯಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಧಿಕಾರಿಗಳ ಜೊತೆ ಸಚಿವರ ಚರ್ಚೆ
ಅಧಿಕಾರಿಗಳ ಜೊತೆ ಸಚಿವರ ಚರ್ಚೆ
author img

By

Published : Aug 9, 2020, 5:03 PM IST

ತಲಕಾವೇರಿ (ಕೊಡಗು): ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತದ ಬಳಿಕ ಕಣ್ಮರೆಯಾಗಿರುವ ನಾಲ್ವರನ್ನು ಹುಡುಕುವ ಕೆಲಸ ಎರಡು ದಿನದಲ್ಲಿ ಮುಗಿಯಬೇಕೆಂದು ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಎನ್‌ಡಿಆರ್‌ಎಫ್ ತಂಡದ ಜೊತೆಗೆ ಎಸ್‌ಡಿಆರ್‌ಎಫ್ ತಂಡಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಚರಣೆ ತೀವ್ರಗೊಳಿಸಬೇಕು. ಆ ಮೂಲಕ ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಧಿಕಾರಿಗಳ ಜೊತೆ ಸಚಿವರ ಚರ್ಚೆ

ಸ್ಥಳದಲ್ಲಿ ಈಗಾಗಲೇ 20 ಜನರ ಎನ್​ಡಿಆರ್​ಎಫ್ ತಂಡ ಮತ್ತು 20 ಜನರ ಎಸ್​ಡಿಆರ್​ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವುದು ತಡವಾಗಬಹುದು. ಇದರಿಂದ ಬೇರೆ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಇರುವ ಎಲ್ಲಾ ಫೋರ್ಸ್​ಗಳನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ಆದಷ್ಟು ಬೇಗ ಮುಗಿಸುವಂತೆ ಸೂಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಾಚರಣೆ ತೀವ್ರಗೊಳಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಸಿದ್ಧ. ಕಾರ್ಯಾಚರಣೆಯನ್ನು ಬೇಗ ಮುಗಿಸಿ ಎಂದು ಹೇಳಿದ್ದಾರೆ. ಈ ವೇಳೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.