ETV Bharat / state

ಕೊಡಗಿನಲ್ಲಿ ಮಿತಿಮೀರುತ್ತಿದೆ ಕೊರೊನಾ ಅಟ್ಟಹಾಸ!

ಕಳೆದ ವಾರದಲ್ಲಿ ವಿದೇಶದಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಗೆ ಬಂದಿದ್ದ 35 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿತ್ತು. ವರದಿ ಬರುವಷ್ಟರಲ್ಲೇ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 3 ತಿಂಗಳ ಹಸುಳೆ, 6 ವರ್ಷದ ಮಗು ಜೊತೆಗೆ 56 ವರ್ಷ ವ್ಯಕ್ತಿ ಹಾಗೂ 87 ವರ್ಷದ ವೃದ್ಧನಿಗೂ ಸೋಂಕು ತಗುಲಿದೆ.

tremondous increase in Corona cases in Kodagu
ಕೊಡಗಿನಲ್ಲಿ ಮಿತಿಮೀರುತ್ತಿದೆ ಕೊರೊನಾ ಅಟ್ಟಹಾಸ...!!
author img

By

Published : Jul 1, 2020, 8:26 PM IST

ಕೊಡಗು: ಕಳೆದ ಒಂದು ವಾರದಿಂದ ದಿನಕ್ಕೆ ಎರಡು, ಮೂರು ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗುತ್ತಿದ್ದ ಕೊಡಗಿನಲ್ಲಿ ಇಂದು ಒಂದೇ ದಿನ 11 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಎದುರಾಗಿದೆ.

ಕಳೆದ ವಾರದಲ್ಲಿ ವಿದೇಶದಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಗೆ ಬಂದಿದ್ದ 35 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿತ್ತು. ವರದಿ ಬರುವಷ್ಟರಲ್ಲೇ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 3 ತಿಂಗಳ ಹಸುಳೆ, 6 ವರ್ಷದ ಮಗು ಜೊತೆಗೆ 56 ವರ್ಷ ವ್ಯಕ್ತಿ ಹಾಗೂ 87 ವರ್ಷದ ವೃದ್ಧನಿಗೂ ಕೊರೊನಾ ಅಟ್ಯಾಕ್ ಆಗಿದೆ.

ನೆಲ್ಯಹುದಿಕೇರಿಯ ಒಬ್ಬ ಸೋಂಕಿತನಿಂದಲೇ ಇದುವರೆಗೆ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದ 10 ಜನರಿಗೆ ಕೊರೊನಾ ಹರಡಿದೆ. ಜೊತೆಗೆ ಶನಿವಾಸಂತೆ ಸಮೀಪದ ಶಿರಂಗಾಲದ ಸೋಂಕಿತನಿಂದಲೂ ನಾಲ್ಕೈದು ಜನರಿಗೆ ಕೊರೊನಾ ಮಹಾಮಾರಿ ತಗುಲಿದೆ. ಒಟ್ಟಿನಲ್ಲಿ ನಿನ್ನೆ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ ಕೊಡಗು ಜಿಲ್ಲೆಯಲ್ಲಿ 11 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಜಿಲ್ಲೆಯ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 58ಕ್ಕೆ ಏರಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಏರಿಯಾಗಳ ಸಂಖ್ಯೆ ಕೂಡ 24ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.