ಕೊಡಗು : ಗುಜರಾತ್ನ ಮೊರ್ಬಿ ದುರಂತ ಇಡಿ ದೇಶವನ್ನು ತಲ್ಲಣಗೊಳಿಸಿದೆ. ದುರಂತ ನಡೆಯುತ್ತಿದಂತೆ ದೇಶದ ಎಲ್ಲ ತೂಗುಸೇತುವೆಯ ಗುಣಮಟ್ಟದ ಬಗ್ಗೆ ಚರ್ಚೆಗಳು ಶುರುವಾಗಿದೆ. ಇದರ ಹೊಸ್ತಿಲಿಲ್ಲಿ ಇದೀಗ ಕೊಡಗಿನ ಒಂದು ತೂಗು ಸೇತುವೆ ಶೀಥಿಲಾವಸ್ಥೆ ತಲುಪಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕಾವೇರಿ ನಿಸರ್ಗಧಾಮ ಬಂದ್ ಮಾಡಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.
ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಪ್ರವಾಸಿತಾಣ ಕಾವೇರಿ ನಿಸರ್ಗಧಾಮಕ್ಕೆ ಇಂದಿನಿಂದ ಒಂದು ತಿಂಗಳ ವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇಲ್ಲಿನ ಶಿಥಿಲಗೊಂಡಿರುವ ತೂಗುಸೇತುವೆ ರಿಪೇರಿ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ತೂಗೂ ಸೇತುವೆಯ ರೋಪ್ ತುಕ್ಕು ಹಿಡಿದಿದ್ದು, ಕೆಲವು ಸ್ಲ್ಯಾಬ್ಗಳು ಕೂಡ ಸಡಿಲಗೊಂಡಿವೆ. ಹೀಗಾಗಿ ದುರಸ್ತಿ ಕಾರ್ಯಕ್ಕೆ ಇಲಾಖೆ ಮುಂದಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
1995ರಲ್ಲಿ ಗೀರಿಶ್ ಭಾರದ್ವಾಜ್ ಎಂಬುವವರು ಈ ಸೇತುವೆ ನಿರ್ಮಾಣ ಮಾಡಿದ್ದಾರೆ. ಸೇತುವೆ ಮೇಲೆ 400 ರಿಂದ 500 ಜನ ಮಾತ್ರ ನಿಲ್ಲುವ ಸಾಮರ್ಥ್ಯವನ್ನ ಮಾತ್ರ ಹೊಂದಿದೆ. ಇತ್ತೀಚೆಗೆ ನಿಸರ್ಗಧಾಮಕ್ಕೆ ಪ್ರವಾಸಿಗರು ಹೆಚ್ಚಾಗಿದ್ದು, ವಾರಾಂತ್ಯದಲ್ಲಿ ಎರಡು ಸಾವಿರದಿಂದ ಮೂರುಸಾವಿರ ಪ್ರವಾಸಿಗರು ನಿಸರ್ಗಧಾಮಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಪ್ರವಾಸಿ ತಿಂಗಳು ಆರಂಭವಾಗಿದ್ದು ಶಾಲಾ ಪ್ರವಾಸವೂ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇದನ್ನೂ ಓದಿ : ದುರಂತಕ್ಕೂ ಮೊದಲು ಸೇತುವೆ ಮೇಲೆ ಯುವಕರ ಚೆಲ್ಲಾಟ: ವೈರಲ್ ವಿಡಿಯೋ