ವಿರಾಜಪೇಟೆ (ಕೊಡಗು): ಕಾಡು ಹಂದಿಯನ್ನು ಹಿಡಿಯಲು ಇಡಲಾದ ಬಲೆಗೆ ಹುಲಿಯೊಂದು ಬಿದ್ದಿರುವ ಘಟನೆ ದಕ್ಷಿಣ ಕೊಡಗಿನ ಬಾಳೆಲೆ ಪಶುವೈದ್ಯ ಆಸ್ಪತ್ರೆ ಕಟ್ಟದ ಸಮೀಪ ನಡೆದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅರಿವಳಿಕೆ ಮದ್ದು ನೀಡಿ ಹುಲಿ ಸೆರೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನು, ಹುಲಿ ಬಲೆಗೆ ಬಿದ್ದಿರುವ ಸುದ್ದಿ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಸಹಜವಾಗಿ ಆತಂಕಕ್ಕೀಡಾಗಿದ್ದಾರೆ.