ETV Bharat / state

ಕೊಡಗಿನಲ್ಲಿ ಹುಲಿ ದಾಳಿಗೆ ಮೂರು ಹಸುಗಳು ಬಲಿ.. ಅರಣ್ಯ ಇಲಾಖೆ ವಿರುದ್ಧ ಜನರ ಅಸಮಾಧಾನ! - ಕೊಡಗಿನಲ್ಲಿ ಹುಲಿ ದಾಳಿಗೆ ಹಸುಗಳು ಸಾವು

ಹುಲಿ ದಾಳಿ ಮಾಡಿ ಒಂದು ತಿಂಗಳಲ್ಲಿ ಮೂರು ಹಸುಗಳನ್ನು ಕೊಂದು ಹಾಕಿದ್ದು, ಹುಲಿ ಸೆರೆಗೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.

tiger fear in kodagu
ಕೊಡಗಿನಲ್ಲಿ ಹುಲಿ ಭೀತಿ
author img

By

Published : Jan 12, 2022, 1:03 PM IST

ಕೊಡಗು : ಕೊಡಗು ಜಿಲ್ಲೆಯಲ್ಲಿ ಹುಲಿ ಭೀತಿ ಹೆಚ್ಚಿದೆ. ಹುಲಿ ದಾಳಿ ಮಾಡಿ ಒಂದು ತಿಂಗಳಲ್ಲಿ ಮೂರು ಹಸುಗಳನ್ನು ಕೊಂದು ಹಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಜನರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದಕ್ಷಿಣ ಕೊಡಗು ಪೊನ್ನಪೇಟೆ ಭಾಗದಲ್ಲಿ ನಾಗರಹೊಳೆ ಕಾಡಿನಿಂದ ಬರುತ್ತಿರುವ ಹುಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಕೊಂದು ಹೋಗುತ್ತಿದ್ದು ಹುಲಿ ದಾಳಿಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪೊನ್ನಪೇಟೆ ತಾಲೂಕಿನ ಬೇಳುರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿರಾಯನ ಅಟ್ಟಹಾಸ ಮಿತಿ ಮೀರಿದೆ.

ಕೊಡಗಿನಲ್ಲಿ ಹುಲಿ ಭೀತಿ..ಅರಣ್ಯ ಇಲಾಖೆ ವಿರುದ್ಧ ಜನರ ಅಸಮಧಾನ

ಒಂದು ವರ್ಷದ ಹಿಂದೆ ಇದೇ ಭಾಗದಲ್ಲಿ ಮೂರು ಮನುಷ್ಯರನ್ನು 50ಕ್ಕೂ ಹೆಚ್ಚು ಹಸುಗಳನ್ನು ಕೊಂದು ಹಾಕಿದ ಹುಲಿ ಅರಣ್ಯ ಇಲಾಖೆಯ ಗುಂಡೇಟಿಗೆ ಬಲಿಯಾಗಿತ್ತು. ಈಗ ಮತ್ತೆ ಹುಲಿ ದಾಳಿ ಮಾಡುತ್ತಿದೆ. ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಖುಷಿ ಪಡಬೇಕೋ, ದುಃಖ ಪಡಬೇಕೋ ಗೊತ್ತಾಗುತ್ತಿಲ್ಲ: ಜೈಲಿನಿಂದ ಬಿಡುಗಡೆ ಬಳಿಕ ಸಂಪತ್‌ ಕುಮಾರ್ ದೇಸಾಯಿ ಭಾವುಕ

ಹಸುಗಳನ್ನು ಕೊಂದು ಹಾಕುತ್ತಿರುವ ಹುಲಿಯನ್ನು ಶೀಘ್ರ ಸೆರೆ ಹಿಡಿಯಬೇಕು. ಇಲ್ಲ ಎಂದರೆ ಮುಂದೆ ಹುಲಿ ನರಭಕ್ಷಕವಾಗಿ ಜನರ ಮೇಲೆ ದಾಳಿ ನಡೆಸಬಹುದು. ಹೀಗಾಗಿ ತಕ್ಷಣವೇ ಹುಲಿಯ ಸೆರೆಗೆ ಕ್ರಮ ಕೈಗೊಳ್ಳಬೇಕು. ಮಾನವನ ಮೇಲೆ ಹುಲಿ ದಾಳಿ ನಡೆಸಿದರೆ ಅದರ ಹೊಣೆಯನ್ನು ಇಲ್ಲಿನ ಅಧಿಕಾರಿಗಳು ಹೊರಬೇಕು. ಇಂತಹ ಅನಾಹುತಗಳಿಗೆ ಎಡೆ ಮಾಡಿಕೊಡದ ರೀತಿಯಲ್ಲಿ, ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.