ETV Bharat / state

ಮಕ್ಕಳ ಬಿಸಿಯೂಟದ ಅಕ್ಕಿ ಕಲಬೆರಕೆ: ಅಕ್ಕಿ ಜೊತೆ ಸಿಕ್ತು ಪ್ಲಾಸ್ಟಿಕ್ ಮಣಿಗಳು! - Plastic beads with rice in kodagu

ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆ - ಆತಂಕದಲ್ಲಿ ಪೋಷಕರು - ಅಕ್ಕಿಯಲ್ಲಿ ಪ್ಲಾಸ್ಟಿಕ್ ಸಿಕ್ಕಿದ್ದು ಮಕ್ಕಳು ಇದನ್ನು ಸೇವಿಸಿ ಅನಾರೋಗ್ಯಕ್ಕೆ ಒಳಗಾದರೆ ಯಾರು ಹೋಣೆ ಎಂದ ಪೋಷಕರ ಪ್ರಶ್ನೆ.

Plastic beads with rice in kodagu
ಮಕ್ಕಳ ಬಿಸಿಯೂಟದ ಅಕ್ಕಿ ಕಲಬೆರಕೆ: ಅಕ್ಕಿಯ ಜೊತೆ ಸಿಕ್ತು ಪ್ಲಾಸ್ಟಿಕ್ ಮಣಿಗಳು
author img

By

Published : Jan 14, 2023, 10:56 PM IST

ಕೊಡಗು: ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರನ್ನ ಆತಂಕಕ್ಕೆ ದೂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿದೆ. ಮೂಟೆಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದ ಅಕ್ಕಿಯನ್ನು, ಪ್ಲಾಸ್ಟಿಕ್ ಅಕ್ಕಿ ಅಂತಾ ಆತಂಕಗೊಂಡ ಪೋಷಕರು ಶಾಲೆಯಲ್ಲಿನ ಅಕ್ಕಿ ಮೂಟೆಯನ್ನ ಪರಿಶೀಲನೆ ಮಾಡಿ ನೋಡಿದಾರೆ. ಈ ಅಕ್ಕಿ ಸಾಮಾನ್ಯ ಅಕ್ಕಿಯಂತೆ ಇಲ್ಲ. ಬದಲಾಗಿ ಪ್ಲಾಸ್ಟಿಕ್ ಮಾದರಿಯಂತೆ ಇದೆ ಎಂದು ಪೋಷಕರ ಆರೋಪಿಸಿದ್ದಾರೆ.

ಮಕ್ಕಳ ಅಕ್ಷರಶಃ ದಾಸೋಹದ ಬಿಸಿಯೂಕ್ಕೆ ಸರಬರಾಜು ಆಗುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಯಂತ ವಸ್ತುಗಳು ಪತ್ತೆಯಾಗಿರೋದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಮಾಡಿದೆ. ನಿನ್ನೆ ದಿನ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಮಾಡಲು ಮುಂದಾದ ಅಡುಗೆ ಸಿಬ್ಬಂದಿ ಅಕ್ಕಿಯನ್ನ ತೊಳೆಯುವ ಸಂದರ್ಭದಲ್ಲಿ ಪ್ಲಾಸ್ಟಿಕ್ ನಂತ ಮಣಿಗಳು ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಎಚ್ಚೆತ್ತ ಅಡುಗೆ ಸಿಬ್ಬಂದಿ ಶಾಲೆಯ ಪ್ರಮುಖರ ಗಮನಕ್ಕೆ ತಂದಿದ್ದಾರೆ.

ಬಿಸಿಯೂಟಕ್ಕೆ ಸರಬರಾಜು ಆದ ಅಕ್ಕಿಯನ್ನ ಶಿಕ್ಷಕರು ಪರಿಶೀಲಿಸಿದ್ದಾಗ ಶಾಲೆಗೆ ರವಾನೆಯಾದ ಒಂದು ಮೂಟೆಯಲ್ಲಿ ಈ ರೀತಿಯ ಒಂದು ಮಣಿಗಳು ಪತ್ತೆಯಾಗಿದೆ. ಒಂದು ವೇಳೆ ಅಡುಗೆ ಸಿಬ್ಬಂದಿಗಳು ಸರಿಯಾಗಿ ಗಮನಿಸದೆ ಅಡುಗೆ ಮಾಡಿದಲ್ಲಿ ದೊಡ್ಡದೊಂದು ಅನಾಹುತ ನಡೆದೆ ಹೋಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ಸರ್ಕಾರಿ ಫ್ರೌಡಶಾಲೆಯಲ್ಲಿ 200 ಕ್ಕೂ ಹೆಚ್ಚು ಮಕ್ಕಳಿದ್ದು, ಎಲ್ಲ ಮಕ್ಕಳೂ ಕೂಡ ಬಡವರ್ಗದ ಮಕ್ಕಳಾಗಿದ್ದಾರೆ. ಈ ಬಡ ಮಕ್ಕಳ ಬಿಸಿಯೂಟದ ಅಕ್ಕಿಯನ್ನೂ ಕೂಡ ಕಲಬೇರಕೆ ಮಾಡಿ ಸರಬರಾಜು ಮಾಡುತ್ತಿರೋದು ವಿಪರ್ಯಾಸವೇ ಸರಿ.

ಕಳೆದೆರಡು ವಾರದ ಹಿಂದೆಯಷ್ಟೇ ಬಂದ ಅಕ್ಕಿಯ ಒಂದು ಚೀಲದಲ್ಲಿ ಈ ರೀತಿಯ ಮಣಿಗಳು ಪತ್ತೆಯಾಗಿದ್ದು ಶಾಲಾ ಆಡಳಿತ ಮಂಡಳಿ ಹಾಗೂ SDMC ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದು ಸರಬರಾಜು ಆದ ಅಕ್ಕಿಯನ್ನ ಹಿಂದಿರುಗಿಸಲಾಗಿದೆ. ಇದು ಕೇವಲ ಮಕ್ಕಳಿಗೆ ಮಾತ್ರ ಸರಬರಾಜು ಆಗೊ ಪಡಿತರವಲ್ಲ ಬದಲಾಗಿ ನ್ಯಾಯಬೆಲೆ ಅಂಗಡಿಗಳಿಗೂ ಈ ಅಕ್ಕಿ ಸರಬರಾಜು ಆಗುತ್ತೆದೆ ಎಂಬ ಮಾಹಿತಿ ಲಭ್ಯವಾಗಿದೆ‌.

ಕೊಡಗಿಗೆ ಬರೋ ಅಕ್ಕಿ ಬಹುತೇಕ ಹರಿಯಾದಿಂದ ಬರುತ್ತಿದೆ ಎನ್ನಲಾಗಿದೆ‌. ಹರಿಯಾದ ಭಾಗದಿಂದ ಅಕ್ಕಿಯನ್ನ ಮಡಿಕೇರಿಯ ಫುಡ್ ಸಪ್ಲೇ ಗೋಡಾನ್ ನಲ್ಲಿ ಶೇಕರಿಸಿಟ್ಟು ಅಲ್ಲಿಂದ ಎಲ್ಲಕಡೆಗಳಿಗೂ ಅಕ್ಕಿ ಸಪ್ಲೆ ಅಗುತ್ತದೆ. ಇನ್ನೂ ಈ ಒಂದು ಘಟನೆ ಸಂಭಂದ ಶಾಲೆಯ ಎಸ್.ಡಿ.ಎಂ.ಸಿ ಪ್ರಮುಖರು ಕೊಡಗು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

ಸರ್ಕಾರಿ ಪ್ರೌಢಶಾಲಾ ಅಕ್ಷರ ದಾಸೋಹ ಕ್ಕೆ ಕೊಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳು ಸಿಕ್ಕಿರವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಜವ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳಿಗೆ ಸರಿಯಾದ ಆಹಾರ ವ್ಯವಸ್ಥೆ ಸಿಗುತ್ತದೆ ಎಂದು ವಿದ್ಯಾರ್ಥಿ ನಿಲಯದಲ್ಲಿ ಹೋಗುತ್ತಾರೆ. ಅದರೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಸಿಕ್ಕಿದ್ದು ಮಕ್ಕಳು ಇದನ್ನು ಸೇವಿಸಿ ಅನಾರೋಗ್ಯಕ್ಕೆ ಒಳಗಾದರೆ ಯಾರು ಹೋಣೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ:ಮಡಿಕೇರಿಯಲ್ಲಿ 2022ರ ಕೊನೆಯ ಸೂರ್ಯಾಸ್ತ ಕಣ್ತುಂಬಿಕೊಂಡ ಪ್ರವಾಸಿಗರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.