ETV Bharat / state

ಪೊಲೀಸ್​ ಹಲ್ಲೆಯಿಂದ ಮಾನಸಿಕ ಅಸ್ವಸ್ಥ ಸಾವು ಆರೋಪ

author img

By

Published : Jun 12, 2021, 9:28 PM IST

ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಎನ್ನಲಾಗಿದ್ದ ಮಾನಸಿಕ ಅಸ್ವಸ್ಥ ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರು ವಿರಾಜಪೇಟೆ ಪೊಲೀಸರ ವಿರುದ್ಧ ಆರೋಪ ಮಾಡ್ತಿದ್ದಾರೆ.

police
ಮಡಿಕೇರಿ

ಮಡಿಕೇರಿ: ಪೊಲೀಸರ ಜೊತೆ ನಡೆದಿದ್ದ ಗಲಾಟೆಯಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾನಸಿಕ ಅಸ್ವಸ್ಥ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತನ ಕುಟುಂಬಸ್ಥರು ಪೊಲೀಸರ ಹಲ್ಲೆಯಿಂದಲೇ ಸಾವನ್ನಪ್ಪಿರುವುದಾಗಿ ವಿರಾಜಪೇಟೆ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಮಡಿಕೇರಿ

ರಾಯ್ ಡಿಸೋಜಾ ಸಾವನ್ನಪ್ಪಿದ ವ್ಯಕ್ತಿ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚಿಕ್ಕಪೇಟೆ ಎಂಬಲ್ಲಿ‌‌ ಜೂ.9ರ ಮಧ್ಯರಾತ್ರಿ ಮನೆಯಿಂದ ಹೊರಟಿದ್ದ ರಾಯ್ ಡಿಸೋಜಾ ಮಚ್ಚು ಹಿಡಿದು ವಿರಾಜಪೇಟೆ ಪಟ್ಟಣದಲ್ಲಿ ಅಲೆದಾಡುತ್ತಿದ್ದ ಎನ್ನಲಾಗಿದೆ. ಇದನ್ನ ಕಂಡ ಪೊಲೀಸರು ಆತನ್ನ ವಿಚಾರಿಸಲು ಮುಂದಾಗಿದ್ದಾರೆ. ಆದರೆ ಆತ ಪೊಲೀಸರ ಮೇಲೂ ಮಚ್ಚು ಬೀಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಹಲ್ಲೆಗೆ ಪ್ರತಿಯಾಗಿ ಪೊಲೀಸರಿಂದ ಕೂಡ ಮರು ದಾಳಿಯನ್ನ ನಡೆಸಿದ್ದಾರೆ. ನಂತರ ಘಟನೆಯಲ್ಲಿ ಗಾಯಗೊಂಡ ರಾಯ್ ಡಿಸೋಜಾರನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪ್ರಕರಣದ ಗಂಭೀರತೆ ಅರಿತ ವಿರಾಜಪೇಟೆ ಪೊಲೀಸರು ರಾಯ್ ಕುಟುಂಬಕ್ಕೆ ಬೇಡಿಕೆಯಿಟ್ಟು ಗಾಯಾಳುವನ್ನು ಬೆಂಗಳೂರಿಗೆ ಕರೆದೊಯ್ದು ತಾವೇ ಚಿಕಿತ್ಸೆ ನೀಡುವುದಾಗಿ ಹೇಳುತ್ತಿದ್ದರಂತೆ. ಮತ್ತೊಂದೆಡೆ ಪೊಲೀಸರು ಮಾನಸಿಕ ಅಸ್ವಸ್ಥ ರಾಯ್ ತಮ್ಮ ಮೇಲೆ ಕತ್ತಿಯಿಂದ ಹಲ್ಲೆಗೆ ಮುಂದಾಗಿದ್ದ ಎಂದು ಕೂಡ ಪ್ರತಿ ದೂರು ನೀಡಿದ್ದರು. ಇನ್ನೂ ರಾಯ್​ ಸಾವಿನ‌ ಸುದ್ದಿ ತಿಳಿಯುತ್ತಿದ್ದಂತೆ ಅವನ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಮಾನಸಿಕ ಅಸ್ವಸ್ಥನ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪೊಲೀಸರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ವಿರಾಜಪೇಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕೊಡಗು ಎಸ್​​ಪಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ನಮ್ಮ‌ ಗಮನಕ್ಕೂ ಬಂದಿದೆ. ಯಾರು ತಪ್ಪಿತಸ್ಥರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ನಮ್ಮ‌ ಕಡೆಯಿಂದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.