ಕುಶಾಲನಗರ/ಕೊಡಗು: ಉಪಯೋಗಿಸಿದ್ದ ಪಿಪಿಇ ಕಿಟ್ ಅನ್ನು ರಸ್ತೆ ಬದಿ ಬಿಸಾಡಿದ್ದ ಆರೋಗ್ಯ ಸಿಬ್ಬಂದಿ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಸಮೀಪ ಇರುವ ರಸ್ತೆಯಲ್ಲಿ ಬಿದ್ದಿರುವ ಪಿಪಿಇ ಕಿಟ್ ಕಂಡು ಕೆಲಕಾಲ ಸ್ಥಳೀಯರು ಆತಂಕಕ್ಕೆ ಒಳಗಾದರು. ಆರೋಗ್ಯ ಸಿಬ್ಬಂದಿ ಬಳಸಿ ಬಿಸಾಡಿರುವ ಪಿಪಿಇ ಕಿಟ್ ಇದಾಗಿದ್ದು, ಇತರರಿಗೆ ಮಾದರಿ ಆಗಬೇಕಾದ ಇವರೇ ಹೀಗೆ ಮಾಡಿದರೆ ಹೇಗೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿದ್ದಾರೆ.
ನಂತರ ಸ್ಥಳೀಯರೇ ಜೆಸಿಬಿ ಯಂತ್ರ ಬಳಸಿ ಪಿಪಿಇ ಕಿಟ್ ಅನ್ನು ಹೂತು ಹಾಕಿದ್ದಾರೆ.