ETV Bharat / state

ಅಂತರ್​​ ಜಿಲ್ಲಾ ಕಳ್ಳರ ಬಂಧನ: ತನಿಖಾ ತಂಡಕ್ಕೆ ಬಹುಮಾನ ಘೋಷಣೆ

author img

By

Published : Jul 2, 2019, 7:45 PM IST

ಒಂಟಿ ಮನೆ ಹಾಗೂ ಪೆಟ್ರೋಲ್ ಬಂಕ್​ಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದ ಖತರ್ನಾಕ್​​ ಗ್ಯಾಂಗ್​​ವೊಂದನ್ನು ಕೊಡಗು ಜಿಲ್ಲಾ ಪೊಲೀಸರು ಯಶ್ವಸ್ವಿಯಾಗಿ ಬಂಧಿಸಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತನಿಖಾ ತಂಡಕ್ಕೆ ಕೊಡಗಿನ ಎಸ್ಪಿ ನಗದು ಬಹುಮಾನ ಘೋಷಿಸಿದ್ದಾರೆ.‌

ಅಂತರ್ ಜಿಲ್ಲಾ ಕಳ್ಳರ ಬಂಧನ

ಕೊಡಗು: ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧಿಸಿ, ಬಂಧಿತರಿಂದ 2,50,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಮನಗರದ ಪ್ರವೀಣ್ (25), ಹಾಸನದ ಗಣೇಶ್ (30), ಮೈಸೂರಿನ ಕುಮಾರ(33) ಹಾಗೂ ಅಭಿಷೇಕ್ (23) ಬಂಧಿತ ಆರೋಪಿಗಳು. ಜೂನ್ 17ರಂದು ಹೆಬ್ಬಾಲೆ ಪೆಟ್ರೋಲ್ ಬಂಕ್ ದರೋಡೆ ಪ್ರಕರಣವನ್ನು ಬೆನ್ನತ್ತಿದ್ದಾಗ ರಾಜ್ಯದ 5 ಜಿಲ್ಲೆಗಳಲ್ಲಿನ 10 ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ನಡೆದ 13 ದಿನಗಳೊಳಗೆ ಖದೀಮರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

ಘಟನೆ ನಡೆದ 13 ದಿನಗಳೊಳಗೆ ಖದೀಮರನ್ನು ಯಶಸ್ವಿಯಾಗಿ ಬಂಧಿಸಿದ ಪೊಲೀಸರು

ಇನ್ನು ಆರೋಪಿಗಳಿಂದ 2 ಬೈಕ್, 2 ಲಾಂಗ್, 10‌ಕ್ಕೂ ಅಧಿಕ ಮೊಬೈಲ್ ಮತ್ತು ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ತಂಡ ಒಂಟಿ ಮನೆ ಹಾಗೂ ಪೆಟ್ರೋಲ್ ಬಂಕ್​ಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿತ್ತು.‌ ಅಲ್ಲದೆ ಕೊಡಗು ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು‌ ಹಾಗೂ ಹಾಸನದಲ್ಲಿ ಇವರ ಮೇಲೆ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಪ್ರವೀಣ್ ಮೇಲೆ ಶನಿವಾರ ಸಂತೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತನಿಖಾ ತಂಡಕ್ಕೆ ಕೊಡಗು ಎಸ್ಪಿ ಸುಮನ್ ಡಿ. ಪನ್ನೇಕರ್ ನಗದು ಬಹುಮಾನ ಘೋಷಿಸಿದ್ದಾರೆ.‌

ಪ್ರಕರಣದ ಹಿನ್ನೆಲೆ:

ಕಳೆದ ‌ಜೂನ್ 17ರಂದು ಹೆಬ್ಬಾಲೆ ಪೆಟ್ರೋಲ್ ಬಂಕ್‌ನಲ್ಲಿ ಖದೀಮರ ತಂಡವೊಂದು ಲಾಂಗ್ ತೋರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿತ್ತು. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​‌ 420, 394, 427ರ ಅಡಿ ಪ್ರಕರಣ ದಾಖಲಿಸಲಾಗಿತ್ತು.‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಸ್ಥಳದಲ್ಲಿನ ಸಿಸಿಟಿವಿ, ಫಿಂಗರ್ ಪ್ರಿಂಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಖದೀಮರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

Intro:ಅಂತರ್ ಜಿಲ್ಲಾ ಕಳ್ಳರ ಬಂಧನ: ಪ್ರಕರಣ ನಡೆದು 13 ದಿನಗಳಲ್ಲಿ ಹಂತಕರು ಅಂದರ್

ಕೊಡಗು: ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧಿಸಿ ಬಂಧಿತರಿಂದ 2,50,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಜೂನ್ 17 ರಂದು ಹೆಬ್ಬಾಲೆ ಪೆಟ್ರೋಲ್ ಬಂಕ್ ದರೋಡೆ ಪ್ರಕರಣ ಬೆನ್ನತ್ತಿದ್ದಾಗ 5 ಜಿಲ್ಲೆಗಳ 10 ಪ್ರಕರಣಗಳು ಬೆಳಕಿಗೆ ಬಂದಿದ್ದು,ರಾಮನಗರದ ಪ್ರವೀಣ್ (25), ಹಾಸನದ ಗಣೇಶ್ (30), ಮೈಸೂರಿನ ಕುಮಾರ(33) ಹಾಗೂ ಅಭಿಷೇಕ್ (23) ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಕೊಡಗು ಎಸ್ಪಿ ಸುಮನ್ ಡಿ.ಪನ್ನೇಕರ್ ಹೇಳಿದರು.‌

ಕೆಲವು ದಿನಗಳ ಹಿಂದಷ್ಟೆ ಎ ಆರ್ ಪೆಟ್ರೋಲ್ ಬಂಕ್‌ನಲ್ಲಿ ಲಾಂಗ್ ತೋರಿಸಿದ್ದ ತಂಡ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದರು.ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ 420, 394, 427 ಐಪಿಸಿ ಅಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.‌

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಸುಮನ್ ಡಿ ಪನ್ನೇಕರ್ ನೇತೃತ್ವದಲ್ಲಿ ಸ್ಥಳದಲ್ಲಿ ಸಿಸಿಟಿವಿ, ಫಿಂಗರ್ ಪ್ರಿಂಟ್ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನೆ ನಡೆದ 13 ದಿನಗಳೊಳಗೆ ಖದೀಮರನ್ನು ಬಂಧಿಸಿ ಆರೋಪಿಗಳಿಂದ 2 ಬೈಕ್, 2 ಲಾಂಗ್, 10‌ ಕ್ಕೂ ಅಧಿಕ ಮೊಬೈಲ್ ಮತ್ತು ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ತಂಡ ಒಂಟಿ ಮನೆ ಹಾಗೂ ಪೆಟ್ರೋಲ್ ಬುಕ್‌ ಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು.‌ಅಲ್ಲದೆ ಕೊಡಗು ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು‌ ಹಾಗೂ ಹಾಸನ ದರೋಡೆ ಪ್ರಕರಣಗಳು ದಾಖಲಾಗಿದ್ದವು.
ಬಂಧಿತ ಪ್ರವೀಣ್ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಇದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತನಿಖಾ ತಂಡಕ್ಕೆ ಕೊಡಗು ಎಸ್ಪಿ ನಗದು ಬಹುಮಾನ ಘೋಷಿಸಿದ್ದಾರೆ.‌

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.