ETV Bharat / state

ಮಡಿಕೇರಿಯಲ್ಲಿ ಅರ್ಧಕ್ಕೆ ಮೊಟಕುಗೊಂಡ ಅಮಿತ್ ಶಾ ರೋಡ್ ಶೋ - ಮುಂಬರುವ ವಿಧಾನಸಭಾ ಚುನಾವಣೆ

ಕೇಂದ್ರ ಸಚಿವ ಅಮಿತ್​ ಶಾ ಅವರು ಇಂದು ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದರು.

Amit Shah road show for BJP candidates
Amit Shah road show for BJP candidates
author img

By

Published : Apr 29, 2023, 4:33 PM IST

ಕೊಡಗು: ರಾಜ್ಯ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕೇಂದ್ರ ಸಚಿವ ಅಮಿತ್​ ಶಾ, ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ, ಎಂ. ಪಿ. ಅಪ್ಪಚ್ಚು ರಂಜನ್ ಪರ ರೋಡ್ ಶೋ ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ತೆರಳಿದ ಶಾ, ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಶ್ರೀ ಚೌಡೇಶ್ವರಿ ದೇವಾಲಯದಿಂದ ಆರಂಭವಾದ ರೋಡ್ ಶೋ ತಿಮ್ಮಯ್ಯ ಸರ್ಕಲ್​ ವರೆಗೆ ನಡೆಯಿತು. ನಿಗದಿಗಿಂತ ಸ್ವಲ್ಪ ತಡವಾಗಿ ಆರಂಭವಾದ ಈ ರೋಡ್ ಶೋದಲ್ಲಿ ಕೊಡವ ಸಾಂಪ್ರದಾಯಿಕ ವಾಲಗ, ಜಾನಪದ ನೖತ್ಯ ತಂಡಗಳು ಗಮನ ಸೆಳೆದವು. ರೋಡ್ ಶೋ ನಡೆಯಲಿರುವ ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಹೆಜ್ಜೆ ಹೆಜ್ಜೆಗೂ ಬಿಜೆಪಿ ಪರ ಘೋಷಣೆ ಮೊಳಗಿದ್ದವು. ರಸ್ತೆಯುದ್ದಕ್ಕೂ ಅಭಿಮಾನಿಗಳು, ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ನಿಂತಿದ್ದರು.

ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ: ನಿಗದಿಗಿಂತ ಸ್ವಲ್ಪ ತಡವಾಗಿ ಆರಂಭವಾದ ರ‍್ಯಾಲಿಯನ್ನು ಕಾರಣಾಂತರಗಳಿಂತ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಸಮಯದ ಅಭಾವದಿಂದ ಅಮಿತ್ ಶಾ ಉಡುಪಿ ಜಿಲ್ಲೆಯ ಕಾಪುಗೆ ಮುಂದಿನ ಪ್ರಯಾಣ ಬೆಳೆಸಿದ್ದರಿಂದ ಇಲ್ಲಿಯ ರ‍್ಯಾಲಿಯು ಅರ್ಧಕ್ಕೆ ಮೊಟಕುಗೊಂಡಿತು. ಅಮಿತ್ ಶಾ ಅವರು ದಿಢೀರ್ ಅಗಿ ಹೊರಟು ಹೋಗಿದ್ದರಿಂದ ಜಿಲ್ಲೆಯ ವಿವಿಧೆಡೆಯಿಂದ ಅವರನ್ನು ನೋಡಲು ಅಗಮಿಸಿದ್ದ ಸಾವಿರಾರು ಕಾರ್ಯಕರ್ತರು ನಿರಾಶೆಯಿಂದ ಮನೆಯತ್ತ ತೆರಳಿದರು. ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರು ರೋಡ್ ಶೋದಲ್ಲಿ ಅಮಿತ್ ಶಾ ಅವರಿಗೆ ಸಾಥ್ ನೀಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.