ETV Bharat / state

ನಾವೆಲ್ಲ ಒಟ್ಟಿಗಿದ್ದೇವೆ,‌ ಮುಂದೆಯೂ ಹಾಗೆಯೇ ಇರುತ್ತೇವೆ: ಬಿ.ಸಿ.ಪಾಟೀಲ್

ಹೆಚ್​.ವಿಶ್ವನಾಥ್​ ಅವರು ಸಚಿವ ಸ್ಥಾನ ಪಡೆಯಲು ಅರ್ಹರಲ್ಲ ಎಂದು ಕೋರ್ಟ್ ಆದೇಶ ನೀಡಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದೇವೆ ಎಂದಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್
Agriculture Minister B C Patil
author img

By

Published : Dec 3, 2020, 1:49 PM IST

ಪೊನ್ನಂಪೇಟೆ (ಕೊಡಗು): ವಿಶ್ವನಾಥ್ ಅವರಿಗೆ ಮಂತ್ರಿ ಪದವಿ ಕೊಡಬೇಕೆಂದು ನಾವೆಲ್ಲರೂ ಒತ್ತಾಯ ಮಾಡಿದ್ದೆವು. ನಾವೆಲ್ಲರೂ ಒಟ್ಟಿಗೆ ಬಂದಿದ್ದೇವೆ, ಈಗಲೂ ಒಟ್ಟಿಗಿದ್ದೇವೆ, ಮುಂದೆಯೂ ಒಟ್ಟಿಗೆ ಇರುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಹಾಗೂ ಎಂಎಲ್‌ಸಿ ಸ್ಥಾನ ಕೊಡದಂತೆ ಪ್ರಸ್ತುತ ನ್ಯಾಯಾಲಯದ ಆದೇಶ ತೊಡಕು ತಂದಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದೇವೆ ಎಂದರು.

ಮಳೆ ಬಡಿದ ಮಗಳಂತೆ ನಾವೆಲ್ಲರೂ ಬಿಜೆಪಿಗೆ ಬಂದಿದ್ದೇವೆ. ಈಗ ಮಗಳನ್ನು ಸೊಸೆಯಂತೆ ಟ್ರೀಟ್ ಮಾಡುತ್ತಿದ್ದಾರೆ. ವಿಶ್ವನಾಥ್ ಅವರಿಗೆ ಬಿಜೆಪಿಯಿಂದ ಅಥವಾ ಸಿಎಂ ಅವರಿಂದ ಯಾವುದೇ ತೊಂದರೆಯಾಗಿಲ್ಲ. ಅವರು ಸೋತಾಗಲೂ ಅವರನ್ನು ಮುಖ್ಯಮಂತ್ರಿ ಅವರು ಎಂಎಲ್‌ಸಿ ಮಾಡಿದ್ದಾರೆ. ಮುಂದೆಯೂ ಅವರ ಹೋರಾಟಕ್ಕೆ ಜೊತೆಯಾಗಿರುತ್ತೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.