ಕಲಬುರಗಿ: ಕಲ್ಯಾಣ ಕರ್ನಾಟಕ ಜನತೆಗೆ ಸ್ಟಾರ್ ಏರ್ ಸಂಸ್ಥೆ ಮತ್ತೊಂದು ಖುಷಿಯ ಸುದ್ದಿ ನೀಡಿದೆ. ಕಲಬುರಗಿಯಿಂದ ತಿರುಪತಿಗೆ ವಿಮಾನಯಾನ ಪ್ರಾರಂಭಿಸುವ ಮೂಲಕ ಒಂದು ಗಂಟೆಯಲ್ಲಿ ತಿರುಪತಿಗೆ ತಲುಪುವ ವ್ಯವಸ್ಥೆ ಮಾಡಿದೆ.
ಜನವರಿ 11ರಿಂದ ತಿರುಪತಿಗೆ ವಿಮಾನಯಾನ ಸೌಲಭ್ಯ ಲಭ್ಯವಾಗಲಿದೆ. ಪ್ರತಿ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ, ವಾರದ ನಾಲ್ಕು ದಿನ ವಿಮಾನ ಸಂಚಾರ ನಡೆಯಲಿದ್ದು, ₹2000 ಮೂಲ ಟಿಕೆಟ್ ದರ ನಿಗದಿಪಡಿಸಲಾಗಿದೆ. ಬೆಳಗ್ಗೆ 9.55ಕ್ಕೆ ಕಲಬುರಗಿಯಿಂದ ಹಾರುವ ವಿಮಾನ ಬೆಳಗ್ಗೆ 11ಕ್ಕೆ ತಿರುಪತಿ ತಲುಪಲಿದೆ. ಮಧ್ಯಾಹ್ನ 2.25ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 3.30ಕ್ಕೆ ಕಲಬುರಗಿ ತಲುಪಲಿದೆ. ಈಗಾಗಲೇ ಬುಕಿಂಗ್ ಕೂಡಾ ಆರಂಭಗೊಂಡಿದೆ.
ಮುಂಬೈ–ಹೈದರಾಬಾದ್‌ಗೂ ವಿಮಾನ ಕಲ್ಪಿಸುವಂತೆ ಮನವಿ :
ಬೆಂಗಳೂರು, ದೆಹಲಿ ನಂತರ ಇದೀಗ ತಿರುಪತಿಗೆ ವಿಮಾನಯಾನ ಆರಂಭಗೊಳ್ಳುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂಧನೆ ದೊರಕಿದೆ. ವಾಣಿಜ್ಯ ವಹಿವಾಟಿಗೆ ಅನಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿಯಿಂದ ಮುಂಬೈ ಹಾಗೂ ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭಿಸುವಂತೆ ಅಲಯನ್ಸ್ ಏರ್ ಸಂಸ್ಥೆಗೆ ಹೈದ್ರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡ್ರಸ್ಟ್ರಿಸ್ ಮನವಿ ಸಲ್ಲಿಸಿದೆ. ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೆಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ತಿಳಿಸಿದ್ದಾರೆ.
ಓದಿ : ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬಂಕಿ; ಲಕ್ಷಾಂತರ ರೂ. ಮೌಲ್ಯದ ಕಬ್ಬಿಗೆ ಹಾನಿ