ETV Bharat / state

ಗಣೇಶ ವಿಸರ್ಜನೆ ವೇಳೆ ಪ್ರಚೋದನಾಕಾರಿ ಹಾಡು: ನಾಲ್ವರ ವಿರುದ್ಧ ಪ್ರಕರಣ ದಾಖಲು - ಮೆಹಬಾಸ್ ಮಸೀದಿ

ಗಣೆಶ ವಿಸರ್ಜನೆ ವೇಳೆ ಪ್ರಚೋದನಾಕಾರಿ ಹಾಡು ಹಾಕಿ ನೃತ್ಯ ಮಾಡಿದ ಹಿನ್ನೆಲೆ ನಾಲ್ವರ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Kn_klb_03
ಗಣೇಶ ವಿಸರ್ಜನೆ ವೇಳೆ ಪ್ರಚೋದನಾಕಾರಿ ಹಾಡು ಪ್ರಕರಣ ದಾಖಲು
author img

By

Published : Sep 12, 2022, 8:25 PM IST

ಕಲಬುರಗಿ: ಗಣೇಶ ವಿಸರ್ಜನೆ ಮೇರವಣಿಗೆ ವೇಳೆ ಮೆಹಬಾಸ್ ಮಸೀದಿ ಬಳಿ ಪ್ರಚೋದನಾಕಾರಿ ಹಾಡು ಹಾಕಿ ನೃತ್ಯ ಮಾಡಿದ ಆರೋಪದ ಹಿನ್ನೆಲೆ ಗಣೇಶ ಮಂಡಳಿಯ ನಾಲ್ವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 10ರ ರಾತ್ರಿ ಬೋವಿ ಸಮಾಜದ ಗಣೇಶ ವಿಸರ್ಜನೆ ವೇಳೆ ನಗರದ ಸೂಪರ್ ಮಾರ್ಕೇಟ್‌ ಮೆಹಬಾಸ್ ಮಸೀದಿ ಬಳಿ 'ತುಮಾರಿ ಔಕಾತ್ ಬತಾದೇಂಗೆ' ಅನ್ನೋ ಹಾಡು ಹಾಕಿ ಯುವಕರು ನೃತ್ಯ ಮಾಡಿದ್ದರು. ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪೊಲೀಸರು ಬೋವಿ ಸಮಾಜ ಗಣೇಶೋತ್ಸವ ಮಂಡಳಿ ಅಧ್ಯಕ್ಷ ತುಕಾರಾಂ ಸೇರಿ ನಾಲ್ವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಒಂದು ಸಮುದಾಯದ ಭಾವನೆಗೆ ಅಘಾತವುಂಟು ಮಾಡುವ ಉದ್ದೇಶದಿಂದ ಹಾಡು ಹಾಕಲಾಗಿದ್ದು, ಜೊತೆಗೆ ಪರವಾನಗಿ ಇಲ್ಲದೇ ಡಿಜೆ ಬಳಕೆ ಮಾಡಲಾಗಿದೆ ಎಂದು ನಗರದ ಬ್ರಹ್ಮಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅಜಯ್ ದೇವಗನ್ ಚಿತ್ರಕ್ಕೆ ಬಹಿಷ್ಕಾರದ ಬಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.