ಕಲಬುರಗಿ: ಬೆಳಗ್ಗೆ ಒಬ್ಬಂಟಿಯಾಗಿ ವಾಯು ವಿಹಾರಕ್ಕೆ ಹೋಗುವ ಜನರನ್ನೇ ಟಾರ್ಗೇಟ್ ಮಾಡಿ, ಏರ್‌ಗನ್, ಚಾಕು ತೋರಿಸಿ ಅವರಿಂದ ಮೊಬೈಲ್ ಸುಲಿಗೆ ಮಾಡಿಕೊಂಡು ಬೈಕ್ ಮೇಲೆ ಪರಾರಿಯಾಗ್ತಿದ್ದ ಖತರ್ನಾಕ್ ಮೊಬೈಲ್ ಸುಲಿಗೆ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗೆ ನಗರದಲ್ಲಿ ಮೊಬೈಲ್ ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಎಂಬಿ ನಗರ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿಶೇಷ ತಂಡ ರಚಿಸಿಕೊಂಡು ಮೂವರು ಅಪ್ರಾಪ್ತರು ಒಳಗೊಂಡಂತೆ ಒಟ್ಟು 8 ಜನ ಸುಲಿಗೆಕೋರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಯದ್ ಮುದಶಿರ (21), ಸಮೀರ್ ಅಲಿಯಾಸ್ ಬಾಬಾ ಪಟೇಲ್ (19), ಅಬ್ದುಲ್ ಮೊಗನಿ (32), ಮಹಮದ್ ಮೊಬಿನ್ (26), ಸಯ್ಯದ್ ಜಾಫರ್ ಹುಸೇನ್ (29) ಬಂಧಿತರು. ಇವರಿಂದ ಅಂದಾಜು ₹3 ಲಕ್ಷ ಮೌಲ್ಯದ 43 ಮೊಬೈಲ್ ಗಳು, ಕೃತ್ಯಕ್ಕೆ ಬಳಸಿದ 4 ಬೈಕ್ಗಳು, ಏರ್‌ಗನ್, ಚಾಕು ಸೇರಿ ಒಟ್ಟು 5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಆಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಕಲಬುರಗಿ ಹಾಗೂ ಚಿತ್ತಾಪುರ ತಾಲೂಕಿನವರಾಗಿದ್ದಾರೆ ಎಂದು ಡಿಸಿಪಿ ಆಡೂರು ಶ್ರೀನಿವಾಸಲು ಹೇಳಿದರು.
ಇದನ್ನೂ ಓದಿ:ಆನೇಕಲ್ ಪೊಲೀಸರ ಭರ್ಜರಿ ಬೇಟೆ.. ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್