ಕಲಬುರಗಿ: ರೈತರ ವಿಶೇಷ ಹಬ್ಬವಾದ ಎತ್ತುಗಳ ಹಬ್ಬ ಕಾರಹುಣ್ಣಿಮೆಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ.
ಮುಂಗಾರು ಬಿತ್ತನೆಗೂ ಮುನ್ನಾ ಬರುವ ಹುಣ್ಣಿಮೆಯ ದಿನದಂದು ಎತ್ತುಗಳನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ, ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ಜೀವನಾಧಾರವಾಗಿರುವ ಎತ್ತುಗಳಿಗೆ ಗೌರವ ಅರ್ಪಿಸಿದ ನಂತರ ಅವುಗಳ ಓಟದ ಸ್ಪರ್ಧೆ ನಡೆಯುತ್ತದೆ. ಕೆಲವೆಡೆ ಬರೀ ಎತ್ತುಗಳನ್ನು ಕರಿಹರಿಸಿದರೆ, ಮತ್ತೆ ಕೆಲವೆಡೆ ಎತ್ತಿನ ಚಕ್ಕಡಿಯೊಂದಿಗೆ ಕರಿ ಹರಿಸಲಾಗುತ್ತದೆ. ಈ ಹಬ್ಬದಲ್ಲಿ ರೈತನ ಅವಿಭಾಜ್ಯ ಅಂಗಗಳಾಗಿರುವ ಎತ್ತುಗಳ ಕರಿಹರಿಸುವ ಮೂಲಕ ಅವುಗಳಿಗೆ ಗೌರವ ಸಲ್ಲಿಸಲಾಗುತ್ತದೆ.