ETV Bharat / state

ಸೋಂಕು ಹೆಚ್ಚಾಗಲು ಜನರ ನಿಷ್ಕಾಳಜಿ ಒಂದು ಪ್ರಮುಖ ಕಾರಣ : ಕಲಬುರಗಿ ಡಿಸಿ - District Collector V.V. Jyotsna

20,815 ವಾಹನಗಳನ್ನ ಸೀಜ್ ಮಾಡಲಾಗಿದೆ. ಇಷ್ಟಾದರು ಜನ ಮಾತು ಕೇಳದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ಯಾಸ್ ಉತ್ಪಾದನ ಏಜೆನ್ಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಮಸ್ಯೆ ನಿವಾರಣೆಯಾಗುತ್ತಿದೆ..

kalaburagi-dc-talk-about-corona-issue
ಕಲಬುರಗಿ ಡಿಸಿ
author img

By

Published : May 15, 2021, 5:24 PM IST

ಕಲಬುರಗಿ : ಜಿಲ್ಲೆಯಲ್ಲಿ 15,836 ಆ್ಯಕ್ಟಿವ್ ಕೇಸ್‌ಗಳಿವೆ. ಪಾಸಿಟಿವ್ ರೇಟ್ ಶೇ. 26.12 ಇದೆ. ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ 76 ಜನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಜಿಲ್ಲೆಯ ಕೊರೊನಾ ಸ್ಥಿತಿಗತಿ ಕುರಿತಂತೆ ಕಲಬುರಗಿ ಡಿಸಿ ಮಾಹಿತಿ..

ಓದಿ: ಮುಂಬೈ: ಕೋವಿಡ್ ರೋಗಿಗಳ ಸೇವೆಗೆ ನಿಂತ ದೇವಾಲಯಗಳು ಮತ್ತು ಗುರುದ್ವಾರಗಳು

ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಜಾಸ್ತಿಯಾಗುತ್ತಿದೆ. 900 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದನೆ ಆಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಕೇಸ್ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿಯೊಂದು ಗ್ಯಾಸ್ ಉತ್ಪಾದನ ಕೇಂದ್ರದಲ್ಲಿ ತಾಲೂಕು ಮಟ್ಟದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಶುರುವಾಗಿದೆ ಎಂದರು.

ಜಿಲ್ಲೆಯಲ್ಲಿ ಜನ ನಿಷ್ಕಾಳಜಿ ವಹಿಸುತ್ತಿದ್ದಾರೆ. ಮದುವೆ, ಸಮಾರಂಭಗಳಲ್ಲಿ ಇನ್ನೂ ಗುಂಪು ಗುಂಪಾಗಿ ಜನ ಸೇರುತ್ತಿದ್ದಾರೆ. ಕೇಸ್‌ಗಳು ಜಾಸ್ತಿ ಆಗ್ತಿರೋದಕ್ಕೆ ಜನರ ನಿಷ್ಕಾಳಜಿ ಒಂದು ಪ್ರಮುಖ ಕಾರಣ ಎಂದರು. ಮಾಸ್ಕ್ ಇಲ್ಲದ 12,555 ಜನರಿಗೆ ಇದುವರೆಗೆ ದಂಡ ವಿಧಿಸಲಾಗಿದೆ.

20,815 ವಾಹನಗಳನ್ನ ಸೀಜ್ ಮಾಡಲಾಗಿದೆ. ಇಷ್ಟಾದರು ಜನ ಮಾತು ಕೇಳದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ಯಾಸ್ ಉತ್ಪಾದನ ಏಜೆನ್ಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಮಸ್ಯೆ ನಿವಾರಣೆಯಾಗುತ್ತಿದೆ.

ಅದಕ್ಕಾಗಿ ಜಿಲ್ಲೆಯಲ್ಲಿ ಆಕ್ಸಿಜನ್ ಕಂಟ್ರೋಲ್ ರೂಂ ದಿನದ 24 ಗಂಟೆ ಕೆಲಸ ಮಾಡುತ್ತಿದೆ. ಇನ್ನು ಇದೆ ವೇಳೆ ವ್ಯಾಕ್ಸಿನ್ ವಿಚಾರ ಕುರಿತು ಮಾತನಾಡಿದ ಅವರು, ಮುಂದಿನ ಲಸಿಕೆ ಯಾವಾಗ ಬರುತ್ತೆ ಎಂಬುದರ ಮಾಹಿತಿ ಸದ್ಯಕಿಲ್ಲ. ಲಸಿಕೆ ಹೊತ್ತು ತರುವ ವಾಹನಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿವೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.