ETV Bharat / state

ಹೆಚ್ಚಿದ ಕೊರೊನಾ ಸೋಂಕು: ತಾಲೂಕು ಆಡಳಿತದಿಂದ ಜನಜಾಗೃತಿ - Awareness on Corona

ಸೇಡಂ ಪಟ್ಟಣದ ಬಸ್ ನಿಲ್ದಾಣದ ಬಳಿ ಸಹಾಯಕ ಆಯುಕ್ತ ರಮೇಶ ಕೋಲಾರ ನೇತೃತ್ವದಲ್ಲಿ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Sedam
ಕೊರೊನಾ ಕುರಿತ ಜಾಗೃತಿ
author img

By

Published : Jul 31, 2020, 12:10 AM IST

ಸೇಡಂ: ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರು ಹೆಚ್ಚಳವಾಗುತ್ತಿದ್ದು, ತಾಲೂಕು ಆಡಳಿತ ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪಟ್ಟಣದ ಬಸ್ ನಿಲ್ದಾಣದ ಬಳಿ ಸಹಾಯಕ ಆಯುಕ್ತ ರಮೇಶ ಕೋಲಾರ ನೇತೃತ್ವದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು.

ಸಹಾಯಕ ಆಯುಕ್ತ ರಮೇಶ ಕೋಲಾರ ನೇತೃತ್ವದಲ್ಲಿ ಕೊರೊನಾ ಕುರಿತು ಜಾಗೃತಿಯನ್ನು ಜನರಲ್ಲಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಎಸಿ ರಮೇಶ ಕೋಲಾರ, ಕೊರೊನಾ ಮಹಾಮಾರಿಯ ಕೊಂಡಿ ಕಳಚಬೇಕಾದರೆ ಸಾಬೂನಿನಿಂದ ಕೈ ತೊಳೆಯುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅತಿಮುಖ್ಯವಾಗಿದ್ದು, ಸಾರ್ವಜನಿಕರು ತಾಲೂಕು ಆಡಳಿತದ ಜೊತೆಗೆ ಸಹಕರಿಸಿ, ಕೊರೊನಾದಿಂದ ಮುಕ್ತರಾಗಲು ಮುಂದಾಗಬೇಕು ಎಂದು ಕೋರಿದರು.

ಈ ವೇಳೆ ತಹಶೀಲ್ದಾರ್​ ಬಸವರಾಜ ಬೆಣ್ಣೆಶಿರೂರ, ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಬಿಜೆಪಿ ಮುಖಂಡರಾದ ವಿರೇಶ ಹೂಗಾರ, ಶ್ರೀಮಂತ ಅವಂಟಿ ಇನ್ನಿತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.