ETV Bharat / state

ನರಳಿ ನರಳಿ ಪ್ರಾಣ ಬಿಟ್ಟ ಕೋವಿಡ್ ಸೋಂಕಿತ... ಆತಂಕದಿಂದ ಹೃದಯಾಘಾತವಾಗಿ ಕಾನ್ಸ್​​ಟೇಬಲ್​​ ಸಾವು!

author img

By

Published : Apr 14, 2021, 5:02 PM IST

Updated : Apr 14, 2021, 6:47 PM IST

ಕೋವಿಡ್ ಸೋಂಕಿತ ಮೃತಪಟ್ಟಿರುವುದನ್ನು ನೋಡಿ ಆತಂಕಕ್ಕೊಳಗಾಗಿದ್ದ ಹೆಡ್​ ಕಾನ್ಸ್​​ಟೇಬಲ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಲಬುರಗಿಯ ಜಿಮ್ಸ್​ನಲ್ಲಿ ಈ ಘಟನೆ ನಡೆದಿದೆ.

Head Constable died from heart attack in Kalburgi
ಹೃದಯಾಘಾತದಿಂದ ಹೆಡ್​​ ಕಾನ್​ಸ್ಟೇಬಲ್ ಸಾವು

ಕಲಬುರಗಿ: ಕೋವಿಡ್ ಸೋಂಕಿತ ವ್ಯಕ್ತಿ ನರಳಿ ನರಳಿ ಕೊನೆಯುಸಿರೆಳಿದ್ದದನ್ನು ಕಂಡು ಪಕ್ಕದ ಬೆಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಡ್ ಕಾನ್ಸ್​ಟೇಬಲ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​ನಲ್ಲಿ ನಡೆದಿದೆ.

ಆನಂದ್ ಪ್ರಸಾದ್ ಹೃದಯಾಘಾತದಿಂದ ಮೃತಪಟ್ಟ ಹೆಡ್​ ಕಾನ್ಸ್​​ಟೇಬಲ್​. ನಿಮೋನಿಯಾದಿಂದ ಬಳಲುತ್ತಿದ್ದ ಇವರಿಗೆ ಕೋವಿಡ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಕೋವಿಡ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಇದೇ ವಾರ್ಡ್​ನಲ್ಲಿ ಎರಡು ದಿನಗಳ ಹಿಂದೆ ಇವರ ಪಕ್ಕದ ಬೆಡ್​​ನಲ್ಲಿದ್ದ ಕೊರೊನಾ ಸೋಂಕಿತ ನರಳಿ ನರಳಿ ಮೃತಪಟ್ಟಿದ್ದ. ಇದನ್ನು ಕಂಡ ಆನಂದ್ ಪ್ರಸಾದ್​ ಆತಂಕಕ್ಕೆ ಒಳಗಾಗಿದ್ದರು. ಕುಟುಂಬಸ್ಥರಿಗೆ ಕರೆ‌ ಮಾಡಿ, ನನಗೂ ಇಂತಹ ಸಾವು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಓದಿ : ಶಾಸಕ ರಾಜುಗೌಡಗೆ ಕೊರೊನಾ... ಬೆಂಬಲಿಗರು ಆತಂಕ ಪಡಬಾರದು ಎಂದು ವಿಡಿಯೋ ಮೂಲಕ ಮನವಿ

ಪಕ್ಕದ ಬೆಡ್​ನಲ್ಲಿದ್ದ ವ್ಯಕ್ತಿ ಮೃತಪಟ್ಟ ಬಳಿಕ ನೊಂದಿದ್ದ ಆನಂದ್​ ಪ್ರಸಾದ್​ ಕೋವಿಡ್​ ವರದಿ ನೆಗೆಟಿವ್ ಬಂದರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Last Updated : Apr 14, 2021, 6:47 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.