ETV Bharat / state

ಆಳಂದ ಗಲಾಟೆ ಪ್ರಕರಣ: 60ಕ್ಕೂ ಅಧಿಕ ಜನರ ಮೇಲೆ ಎಫ್​ಐಆರ್​ ದಾಖಲು - ಆಳಂದ ಗಲಾಟೆ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲು

ಆಳಂದ ನಗರದಲ್ಲಿ ಮಂಗಳವಾರ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಎಫ್​ಐಆರ್ ದಾಖಲಾಗಿವೆ.

fir-registered-against-more-than-60-people-in-alanda-clash
ಆಳಂದ ಗಲಾಟೆ ಪ್ರಕರಣ: 60ಕ್ಕೂ ಅಧಿಕ ಜನರ ಮೇಲೆ ಎಫ್​ಐಆರ್​ ದಾಖಲು
author img

By

Published : Mar 2, 2022, 11:54 AM IST

ಕಲಬುರಗಿ: ಪ್ರಾರ್ಥನಾ ಮಂದಿರದಲ್ಲಿರುವ ಶಿವಲಿಂಗ ಪೂಜೆಗೆ ಸಂಬಂಧಿಸಿದಂತೆ ಜಿಲ್ಲೆಯ ಆಳಂದ ನಗರದಲ್ಲಿ ಮಂಗಳವಾರ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಎಫ್​ಐಆರ್ ದಾಖಲಾಗಿವೆ. ಘಟನೆ ಕುರಿತಂತೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಗಲಾಟೆ ಸಂದರ್ಭದಲ್ಲಿ ಸಂಸದ, ಶಾಸಕರು, ಪೊಲೀಸ್​, ಮಾಧ್ಯಮದವರ ವಾಹನಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ನಾಲ್ಕು ಪ್ರತ್ಯೇಕ ಎಫ್​ಐಆರ್​ಗಳಲ್ಲಿ 60ಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೆ, ಪೊಲೀಸರು ಈಗಾಗಲೇ 56 ಜನರನ್ನು ವಶಕ್ಕೆ ಪಡೆದು ವಿಚಾರಣೆ ಕೂಡಾ ನಡೆಸುತ್ತಿದ್ದಾರೆ. ಇನ್ನೂ ಹಲವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

FIR registered against more than 60 people in alanda clash
ಕಾರಿನ ಗಾಜಿಗೆ ಹಾನಿ

ಮಹಾಶಿವರಾತ್ರಿ ಪ್ರಯುಕ್ತ ಆಳಂದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಗಂಗಾಭೀಷೇಕ ಹಾಗೂ ಪೂಜೆ ಸಲ್ಲಿಸಲು ಹೋದಾಗ ಎರಡು ಸಮುದಾಯಗಳ ಮದ್ಯೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಹಲವರಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಶಿವಲಿಂಗ ಪೂಜೆ ವಿಚಾರ : ಆಳಂದ ಪಟ್ಟಣದಲ್ಲಿ ಕಲ್ಲು ತೂರಾಟ, ಪರಿಸ್ಥಿತಿ ಪ್ರಕ್ಷುಬ್ಧ

ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾತಾವರಣ ತಿಳಿಗೊಳಿಸಿದ್ದರು. ಕಲ್ಲು ತೂರಾಟದಲ್ಲಿ ಕೇಂದ್ರ ಸಚಿವ ಭಗವಂತ ಖೂಭಾ, ಶಾಸಕರು, ಮಾಜಿ ಶಾಸಕರು, ಜಿಲ್ಲಾಧಿಕಾರಿಗಳ ಕಾರುಗಳು ಜಖಂಗೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.