ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷರಾಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅಧಿಕಾರ ಸ್ವೀಕರಿಸಿದರು.
ಹಲವು ದಿನಗಳಿಂದ ಖಾಲಿ ಉಳಿದಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ, ಕಲಬುರಗಿ ದಕ್ಷಿಣ ಬಿಜೆಪಿ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ್ ಅವರನ್ನು ಆಯ್ಕೆ ಮಾಡಿ, ಕಳೆದ ನಾಲ್ಕು ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ಇಂದು ಶಾಸಕರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳನ್ನು ಕೆಕೆಆರ್‌ಡಿಬಿ ಮಂಡಳಿ ಒಳಗೊಂಡಿದೆ.
ಈ ವೇಳೆ, ಸಂಸದ ಡಾ. ಉಮೇಶ್ ಜಾಧವ್, ಮಂಡಳಿಯ ಕಾರ್ಯದರ್ಶಿ ಎನ್. ವಿ ಪ್ರಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.