ETV Bharat / state

ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭ: ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ - We are not politics on hijab raw Ashwath Narayan

ಕಾನೂನು ಸುವ್ಯವಸ್ಥೆ ನೋಡಿಕೊಂಡು ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭ ಮಾಡುತ್ತೇವೆ‌‌‌‌. ಸದ್ಯ ಆನ್ ಲೈನ್​ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಗೃಹ ಇಲಾಖೆ ಸಲಹೆ ಮೇರೆಗೆ ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭಿಸಲಾಗುತ್ತದೆ‌ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ‌.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್
author img

By

Published : Feb 12, 2022, 1:24 PM IST

ಕಲಬುರಗಿ: ಪ್ರಕರಣ ನ್ಯಾಯಾಲಯದಲ್ಲಿರುವುದಕ್ಕೆ ಶಾಲಾ, ಕಾಲೇಜು ಪ್ರಾರಂಭಕ್ಕೂ ಸಂಬಂಧವಿಲ್ಲ ಕಾಲೇಜುಗಳು ಶೀಘ್ರದಲ್ಲಿ ಪ್ರಾರಂಭ ಆಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ‌.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆಗಳ ಪ್ರಾರಂಭದ ಈಗಾಗಲೇ ನಿರ್ಧಾರ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ನೋಡಿಕೊಂಡು ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭ ಮಾಡುತ್ತೇವೆ‌‌‌‌. ಸದ್ಯ ಆನ್ ಲೈನ್​ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಗೃಹ ಇಲಾಖೆ ಸಲಹೆ ಮೇರೆಗೆ ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭಿಸಲಾಗುತ್ತದೆ‌ ಎಂದರು.

ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದಿಲ್ಲ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಹಿಜಾಬ್ ವಿವಾದ ಮಾಡ್ತಿದೆ ಅನ್ನೋ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ ನಾರಾಯಣ, ಹಿಜಾಬ್ ವಿಚಾರದಲ್ಲಿ ಯಾರು ರಾಜಕೀಯ ಪ್ರೇರಿತವಾಗಿ ಮಾತಾಡ್ತಿದ್ದಾರೆ ಅನ್ನೋದು ಮಾಧ್ಯಮಗಳಿಗೆ ಗೊತ್ತಿದೆ. ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಬಿಡಿಎ ಸೈಟ್ ಹಗರಣ ವಿಚಾರ: ಬಿಡಿಎ ಸೈಟ್ ಹಂಚಿಕೆ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ, ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗತ್ತದೆ. ತನಿಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು ಸರ್ಕಾರ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್ 2022 ಹರಾಜು ಪ್ರಕ್ರಿಯೆ: ಬೆಂಗಳೂರಿನಲ್ಲಿ 600 ಆಟಗಾರರ ಅದೃಷ್ಟ ಪರೀಕ್ಷೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.