ETV Bharat / state

ರೈತರಿಗೆ ಕಂಟಕವಾದ ಕೃಷ್ಣಮೃಗಗಳು: ಅನ್ನದಾತರಿಗೆ ವಲಯ ಅರಣ್ಯಾಧಿಕಾರಿ ಕೊಟ್ರು ಹೊಸ ಐಡಿಯಾ

author img

By

Published : Jun 26, 2021, 7:25 AM IST

Updated : Jun 28, 2021, 2:33 PM IST

ರೈತರು ಕೃಷ್ಣಮೃಗಗಳ ಕಾಟಕ್ಕೆ ಹೈರಾಣಾಗಿ ಹೋಗಿದ್ದರು. ಬೆಳಗ್ಗೆ ಮತ್ತು ಸಂಜೆ ಬೆಳೆಗಳನ್ನ ಕೃಷ್ಣಮೃಗಗಳಿಂದ ಕಾಪಾಡುವುದೇ ರೈತರಿಗೆ ಕೆಲಸವಾಗುತ್ತಿತ್ತು. ಅಲ್ಲದೆ ತಂತಿಬೇಲಿ, ವಿದ್ಯುತ್, ಪ್ಲಾಸ್ಟಿಕ್ ಕಟ್ಟುವುದು ಶಬ್ದ ಮಾಡುವ ಉಪಕರಣಗಳ ಬಳಕೆ ಸೇರಿದಂತೆ ಹಲವು ಉಪಾಯಗಳನ್ನು ಮಾಡಿದ್ದರು. ಆದರೂ ಸಹ ಕೃಷ್ಣಮೃಗಗಳ ಕಾಟ ನಿಂತಿಲ್ಲ. ಇದಕ್ಕೀಗ ಬ್ರೇಕ್​ ಹಾಕಲು ಬ್ಯಾಡಗಿ ವಲಯ ಅರಣ್ಯಾಧಿಕಾರಿ ಮುಂದಾಗಿದ್ದಾರೆ.

Zonal Forest Officer New Idea in Haveri
ರೈತರಿಗೆ ಕಂಟಕವಾದ ಕೃಷ್ಣಮೃಗಗಳು

ಹಾವೇರಿ : ಮುಂಗಾರು ಬಿತ್ತನೆ ಆರಂಭವಾಯಿತೆಂದರೆ ಸಾಕು ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡುತ್ತೆ. ತಾವು ಬಿತ್ತಿದ ಬೀಜಗಳು ಮೊಳಕೆಯೊಡೆದು ಸಸಿಗಳು ಬೆಳೆಯುತ್ತಿದ್ದಂತೆ ಕೃಷ್ಣಮೃಗಗಳ ಕಾಟ ರೈತರಿಗೆ ಶುರುವಾಗುತ್ತೆ. ರೈತರು ಅದಕ್ಕಾಗಿ ಕಳೆದ ಹಲವು ವರ್ಷಗಳಿಂದ ಸಾಕಷ್ಟು ಉಪಾಯಗಳನ್ನು ಮಾಡಿದ್ದಾರೆ. ಆದರೆ ಕೃಷ್ಣಮೃಗಗಳು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲಾ.

ಈ ಸಮಸ್ಯೆಗೆ ಬ್ಯಾಡಗಿ ವಲಯ ಅರಣ್ಯಾಧಿಕಾರಿ ಇದೀಗ ಹೊಸ ಉಪಾಯ ಕಂಡುಹಿಡಿದಿದ್ದಾರೆ. ಇದು ರೈತರಿಗೆ ಕೃಷ್ಣಮೃಗಗಳಿಗೆ ಸೇರಿದಂತೆ ಪರಿಸರ ಪ್ರೇಮಿ ಉಪಾಯವಾಗಿದ್ದು, ರೈತರ ಮನಗೆದ್ದಿದೆ. ಜಿಲ್ಲೆಯಲ್ಲಿ ಮುಂಗಾರಿಗೆ ಅತ್ಯಧಿಕವಾಗಿ ಶೇಂಗಾ, ಗೋವಿನಜೋಳ, ಸೋಯಾಬೀನ್, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯಲಾಗುತ್ತದೆ. ಸಸಿಗಳು ಎರಡು ಎಲೆಗಳಾಗುತ್ತಿದ್ದಂತೆ ಇವುಗಳಿಗೆ ಕೃಷ್ಣಮೃಗಗಳ ಕಾಟ ಶುರುವಾಗುತ್ತೆ. ಇದರಿಂದ ರೈತ ಮಾಡಿದ ಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ರೈತರಿಗೆ ಕಂಟಕವಾದ ಕೃಷ್ಣಮೃಗಗಳು: ಅನ್ನದಾತರಿಗೆ ವಲಯ ಅರಣ್ಯಾಧಿಕಾರಿ ಕೊಟ್ರು ಹೊಸ ಐಡಿಯಾ

ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಜಿಲ್ಲೆಯಲ್ಲಿ ಮನೆಮಾಡಿದೆ. ರೈತರು ಹಲವು ಉಪಾಯ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಇದನ್ನರಿತ ಬ್ಯಾಡಗಿ ಅರಣ್ಯ ವಲಯಾಧಿಕಾರಿ ಮಹೇಶ್ ಹೊಸ ಉಪಾಯ ಒಂದನ್ನ ಕಂಡುಕೊಂಡಿದ್ದಾರೆ. ಜಮೀನಿನ ಬದುಗಳಲ್ಲಿ ಪರಿಸರಸ್ನೇಹಿ ಟಾರ್ ಸಿಂಪಡಿಸುತ್ತಿದ್ದಾರೆ. ಇದರಿಂದಾಗಿ ಕೃಷ್ಣಮೃಗಗಳು ಜಮೀನಿಗೆ ದಾಂಗುಡಿ ಇಡುವುದಿಲ್ಲ. ಇದನ್ನ ಪರೀಕ್ಷಾರ್ಥವಾಗಿ ತಾಲೂಕಿನ ವಿವಿಧ ಕಡೆ ಜಾರಿಗೆ ತಂದಿದ್ದು, ಇದು ಯಶಸ್ವಿಯಾದರೆ ಎಲ್ಲ ಕಡೆ ಪ್ರಯೋಗಿಸಬಹುದು ಎನ್ನುತ್ತಾರೆ ಅರಣ್ಯಾಧಿಕಾರಿ ಮಹೇಶ್ ಮರೆಣ್ಣವರ್​.

ಈ ಮುಂಚೆ ರೈತರು ಕೃಷ್ಣಮೃಗಗಳ ಕಾಟಕ್ಕೆ ಹೈರಾಣಾಗಿ ಹೋಗಿದ್ದರು. ಬೆಳಗ್ಗೆ ಮತ್ತು ಸಂಜೆ ಬೆಳೆಗಳನ್ನ ಕೃಷ್ಣಮೃಗಗಳಿಂದ ಕಾಪಾಡುವುದೇ ರೈತರ ಕೆಲಸವಾಗುತ್ತಿತ್ತು. ಅಲ್ಲದೆ ತಂತಿಬೇಲಿ, ವಿದ್ಯುತ್, ಪ್ಲಾಸ್ಟಿಕ್ ಕಟ್ಟುವದು ಶಬ್ದ ಮಾಡುವ ಉಪಕರಣಗಳ ಬಳಕೆ ಸೇರಿದಂತೆ ಹಲವು ಉಪಾಯಗಳನ್ನು ಮಾಡಿದ್ದರು. ಆದರೂ ಸಹ ಕೃಷ್ಣಮೃಗಗಳ ಕಾಟ ನಿಂತಿಲ್ಲ. ವಲಯ ಅರಣ್ಯಾಧಿಕಾರಿ ಈ ಹೊಸ ಉಪಾಯ ಮಾಡಿದ್ದಾರೆ. ಅದನ್ನ ನಾವು ಪ್ರಯೋಗಾತ್ಮಕವಾಗಿ ಬಳಿಸುತ್ತಿದ್ದೆವು. ಇವರ ಉಪಾಯ ಯಶಸ್ವಿಯಾದರೆ ತಮಗೆ ಅನುಕೂಲವಾಗಲಿದೆ ಎಂದು ರೈತರು ಹೇಳಿದ್ದಾರೆ.

ಈಗಾಗಲೇ ಬ್ಯಾಡಗಿ ತಾಲೂಕಿನ ಹಲವು ಕಡೆ ಈ ಪ್ರಯೋಗ ಮಾಡಲಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು ವನ್ಯಜೀವಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವದಿಲ್ಲ. ಟಾರ್ ಸಿಂಪಡಿಸುವುದರಿಂದ ಅಹಿತಕರ ವಾಸನೆ ಬರುತ್ತೆ ಮತ್ತು ರುಚಿ ಗೊತ್ತಾಗುವುದಿಲ್ಲ. ಇದರಿಂದಾಗಿ ಕೃಷ್ಣಮೃಗಗಳು ಈ ಕಡೆ ಬರುವುದಿಲ್ಲ. ಇದನ್ನ ಒಮ್ಮೆ ಸಿಂಪಡಣೆ ಮಾಡಿದರೇ ಸಾಕು 15 ದಿನ ಬರುತ್ತೆ. ಅಷ್ಟರಲ್ಲಿ ತಮ್ಮ ಬೆಳೆ ಬೆಳೆದು ದೊಡ್ಡದಾಗುತ್ತೆ. ಸಸಿ ದೊಡ್ಡದಾದರೆ ಕೃಷ್ಣಮೃಗಕ್ಕೆ ತಿನ್ನಲು ಆಗುವುದಿಲ್ಲ, ಹೀಗಾಗಿ ಪ್ರಯೋಗ ಯಶಸ್ವಿಯಾಗುತ್ತೆ ಎನ್ನುವ ಸಂತಸದಲ್ಲಿದ್ದಾರೆ ಅನ್ನದಾತರು.

Last Updated : Jun 28, 2021, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.