ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಟಫ್ ರೂಲ್ಸ್ಗಳನ್ನು ಫಾಲೋ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಪಾಲಿಸದೇ ಜನ ಬೇಕಾಬಿಟ್ಟಿ ಒಡಾಡುತ್ತಿದ್ದಾರೆ.
ನಗರದ ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಜರ್ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸುಮಾರು 25ಕ್ಕೂ ಅಧಿಕ ಎಟಿಎಂ ಕೇಂದ್ರಗಳಿವೆ. ದಿನನಿತ್ಯ ನೂರಾರು ಜನ ಎಟಿಎಂ ಕೇಂದ್ರಗಳಿಗೆ ವ್ಯವಹಾರಕ್ಕಾಗಿ ಬರುತ್ತಿದ್ದಾರೆ. ಆದರೆ ಈ ಎಟಿಎಂಗಳಲ್ಲಿ ಸ್ಯಾನಿಟೈಜರ್ ಮಾಯವಾಗಿದೆ.
ಇನ್ನೂ ಮಾರುಕಟ್ಟೆಯ ಕಿರಾಣಿ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಎಂ.ಜಿ.ರಸ್ತೆಯಲ್ಲಿರುವ ಬಹುತೇಕ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಅಂಗಡಿಯವರು ಸಮಾಜಿಕ ಅಂತರದ ಬಾಕ್ಸ್ ಹಾಕಿದ್ದರೂ ಸಹ ಅದರಲ್ಲಿ ನಿಲ್ಲದೆ ಗ್ರಾಹಕರು ಕಿರಾಣಿ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಗ್ರಾಹಕರು ರೈತರು ಮತ್ತು ದಲ್ಲಾಳಿಗಳ ನಡುವೆ ಯಾವುದೇ ಸಾಮಾಜಿಕ ಅಂತರವಿರಲಿಲ್ಲಾ. ಕೆಲವರು ಮಾಸ್ಕ್ ಧರಿಸದೇ ಬಂದಿದ್ದರು. ಇನ್ನು ಕೆಲವರು ಮಾಸ್ಕ್ ಧರಿಸಿದ್ದರು ಸಹ ಸರಿಯಾಗಿ ಹಾಕಿಕೊಂಡಿರಲಿಲ್ಲ.