ಹಾವೇರಿ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದ ಉಗ್ರಾಣದ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಹಾವೇರಿಯ ಸಿದ್ದಲಿಂಗೇಶ್ವರ ಟ್ರೇಡರ್ಸ್ಗೆ ಸೇರಿದ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ 250 ಕ್ವಿಂಟಲ್ಗೂ ಅಧಿಕ ಅಕ್ಕಿಯನ್ನ ಜಪ್ತಿ ಮಾಡಲಾಗಿದೆ.
3 ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ಅಕ್ಕಿ ವಶಕ್ಕೆ ಪಡೆದಿರುವ ಅಧಿಕಾರಿಗಳು, ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಪೂರ್ವ ವಲಯದ ಐಜಿ ಸ್ಕ್ವಾಡ್ ಪಿಎಸ್ಐ ಸಿದ್ದಾರೂಢ ಬಡಿಗೇರ ಮತ್ತು ಆಹಾರ ಇಲಾಖೆ ಉಪನಿರ್ದೇಶಕ ವಿನೋದಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಗೋದಾಮಿನ ಮಾಲೀಕ ಶಿವಯೋಗಿ ಪಟ್ಟಣಶೆಟ್ಟಿ, ಸಹಾಯಕ ರವಿ ನಾಗನೂರ ಹಾಗೂ ಲಾರಿ ಚಾಲಕ ಶಿವಾ ಕರುಗಲ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.