ETV Bharat / state

ಕೊರೊನಾ ರೂಪಾಂತರಗಳ ಮೇಲೆ ನಿರಂತರ ಅಧ್ಯಯನ ನಡೆಯುತ್ತಿದೆ; ಬೊಮ್ಮಾಯಿ

ಕೋವಿಡ್​​ ರೂಪಾಂತರಗಳ ಅಧ್ಯಯನ ನಡೆಸಲಾಗುತ್ತಿದೆ. ಲ್ಯಾಬ್‌ಗಳಲ್ಲಿ ನಿರಂತರ ಪರೀಕ್ಷೆಗಳು ನಡೆಯುತ್ತಿವೆ. ಕೊರೊನಾ ಗುಣಮುಖರ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಪರಿಣಾಮಗಳನ್ನ ಸಹ ಅಧ್ಯಯನ ಮಾಡಲಾಗುತ್ತಿದೆ. ರೂಪಾಂತರ ವೈರಸ್ ಮತ್ತು ಕೊರೊನಾ ಕಾಣಿಸಿಕೊಂಡು ಆರೋಗ್ಯ ಸುಧಾರಿಸಿದ ಮೇಲೆ ಕಾಣಿಸಿಕೊಳ್ಳುವ ಪರಿಣಾಮಗಳ ಮೇಲೆಯೂ ಸಹ ನಿಗಾ ಇಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

there-is-ongoing-study-on-corona-variant
ಬಸವರಾಜ ಬೊಮ್ಮಾಯಿ
author img

By

Published : Jun 24, 2021, 7:14 PM IST

ಹಾವೇರಿ: ಕೊರೊನಾ ರೂಪಾಂತರಗಳ ಮೇಲೆ ನಿರಂತರ ಅಧ್ಯಯನ ಮಾಡಲಾಗುತ್ತಿದೆ. ಆಲ್ ಇಂಡಿಯಾ ಮಟ್ಟದಲ್ಲಿ ಮತ್ತು ರಾಜ್ಯದಲ್ಲಿ ಇವುಗಳ ಮೇಲೆ ನಿಗಾ ಇಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಕೋವಿಡ್​​ ರೂಪಾಂತರಗಳ ಅಧ್ಯಯನ ನಡೆಸಲಾಗುತ್ತಿದೆ. ಲ್ಯಾಬ್‌ಗಳಲ್ಲಿ ನಿರಂತರ ಪರೀಕ್ಷೆಗಳು ನಡೆಯುತ್ತಿವೆ. ಕೊರೊನಾ ಗುಣಮುಖರ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಪರಿಣಾಮಗಳನ್ನ ಸಹ ಅಧ್ಯಯನ ಮಾಡಲಾಗುತ್ತಿದೆ. ರೂಪಾಂತರ ವೈರಸ್ ಮತ್ತು ಕೊರೊನಾ ಕಾಣಿಸಿಕೊಂಡು ಆರೋಗ್ಯ ಸುಧಾರಿಸಿದ ಮೇಲೆ ಕಾಣಿಸಿಕೊಳ್ಳುವ ಪರಿಣಾಮಗಳ ಮೇಲೆಯೂ ಸಹ ನಿಗಾ ಇಡಲಾಗಿದೆ ಎಂದರು.

ರೂಂಪಾತರಗಳ ಮೇಲೆ ನಿರಂತರ ಅಧ್ಯಯನ ನಡೆಯುತ್ತಿದೆ

ರಾಜ್ಯದಲ್ಲಿ ರೂಪಾಂತರ ವೈರಸ್ ಪತ್ತೆ ಹಚ್ಚಲು ಜಿನೂನ್ ಪರೀಕ್ಷಾ ಕೇಂದ್ರ ಆರಂಭಿಸಲಾಗಿದೆ. ದೇಶಾದ್ಯಂತ ಮತ್ತು ರಾಜ್ಯದಲ್ಲಿ ಈ ಕುರಿತಂತೆ ಏನು ನಿಯಮಗಳನ್ನ ಪಾಲಿಸಬೇಕು ಅವುಗಳನ್ನ ಪಾಲಿಸಲಾಗುತ್ತಿದೆ. ಚಿಕ್ಕಮಕ್ಕಳ ಮೇಲೆ ಮಿಸ್‌-ಸಿ ಮತ್ತು ಎನೆಕ್ ರೂಪಾಂತರ ವೈರಸ್‌ಗಳ ಪರಿಣಾಮವನ್ನ ತಿಳಿಯಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

40 ದಿನಗಳ ಕಾಲ ಮಕ್ಕಳ ಆರೋಗ್ಯ ಶಿಬಿರ

ಮೊದಲನೇ ಅಲೆ ವಯೋವೃದ್ದರಿಗೆ ತೊಂದರೆ ಮಾಡಿದರೆ ಎರಡನೇ ಅಲೆ ಮಧ್ಯವಯಸ್ಕರಿಗೆ ಹೆಚ್ಚು ತೊಂದರೆ ನೀಡಿದೆ. ಮೂರನೇ ಅಲೆ ಚಿಕ್ಕಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವದರಿಂದ ರಾಜ್ಯವ್ಯಾಪಿ 16 ವಯಸ್ಸಿನ ಒಳಗಿನ ಮಕ್ಕಳಿಗೆ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಮುಂದೆ 40 ದಿನಗಳ ಕಾಲ ಈ ಶಿಬಿರಗಳಲ್ಲಿ ಚಿಕ್ಕಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತೆ. ಅಲ್ಲದೆ ಅಗತ್ಯ ಪೋಷಕಾಂಶಗಳನ್ನು ನೀಡಿ ಮಕ್ಕಳನ್ನ ಸದೃಡ ಮಾಡಲಾಗುತ್ತದೆ. ಇದರ ಜೊತೆಗೆ ಪೋಷಕರ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತೆ ಎಂದು ಹೇಳಿದರು.

ಮಾಜಿ ಕಾರ್ಪೊರೇಟರ್​​​ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ

ರೇಖಾ ಕದಿರೇಶ್ ಕೊಲೆ ಪ್ರಕರಣದ ಮಾಹಿತಿ ಬಂದಿದೆ. ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲಾಗುವದು. ಈ ಕೊಲೆಯ ಹಿಂದೆ ಯಾವ ರಾಜಕೀಯ ಮುಖಂಡನ ಕೈವಾಡವಿದೆ ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.