ಹಾವೇರಿ: ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿ ಸರಿಗಮಪ ರನ್ನರ್ಅಪ್, ಗಾಯಕ ಹನುಮಂತ ಲಮಾಣಿ ಮತದಾನ ಮಾಡಿದರು.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಿಲ್ಲೂರು ಬಡ್ನಿಯ ಮತಗಟ್ಟೆ ನಂ.116 ರಲ್ಲಿ ಹನುಮಂತ್ ತಮ್ಮ ಹಕ್ಕು ಚಲಾಯಿಸಿದರು.
ಹನುಮಂತ್ ಲಮಾಣಿ ಹಾವೇರಿ ಜಿಲ್ಲೆಯ ಚುನಾವಣಾ ಪ್ರಚಾರ ರಾಯಭಾರಿಯೂ ಆಗಿದ್ದು, ಇಲ್ಲಿಯವರೆಗೆ ಮತದಾನ ಕುರಿತು ಜಾಗೃತಿ ಮೂಡಿಸಿದ್ದರು.
ಇಂದು ಮತದಾನದ ಬಳಿಕ ಮಾತನಾಡಿದ ಹನುಮಂತ್ ಅವರು, ನಿಮ್ಮ ಹಕ್ಕನ್ನು, ನೀವೇ ಚಲಾಯಿಸಿ. ಸೂಕ್ತ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದು ಜನರಿಗೆ ಮತ್ತೊಮ್ಮೆ ಸಂದೇಶ ರವಾನಿಸಿದರು. ಇದೇ ವೇಳೆ ಈ ಬಾರಿ ಹೆಚ್ಚಿನ ಮತದಾನ ಆಗುವ ವಿಶ್ವಾಸವನ್ನು ಹನುಮಂತ್ ವ್ಯಕ್ತಪಡಿಸಿದರು.