ಹಾವೇರಿ: ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮುಕಾಶ್ಮೀರಕ್ಕೆ ನೀಡಿದ 370 ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯದ ಜನತೆಗೆ ಎಲ್ಲಾ ಸೌಲಭ್ಯಗಳೂ ಸಿಗುತ್ತಿವೆ ಎಂದು ಕಂದಾಯ ಸಚಿವ ಈಶ್ವರಪ್ಪ ತಿಳಿಸಿದರು.
ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಮ್ಮತದ ನಿರ್ಣಯದ ಮೂಲಕ 370 ನೇ ವಿಧಿ ರದ್ದು ಮಾಡಿದೆ. ಇದನ್ನು ವಿರೋಧ ಪಕ್ಷದವರು ವಿರೋಧಿಸಿದ್ರು. ಈಗ ವಿಧಿ ರದ್ದಾದ ಹಿನ್ನೆಲೆ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದರು.
ರಾಜ್ಯದಲ್ಲಿ ನೆರೆ ಪರಿಹಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ನೆರೆ ಪರಿಹಾರದ ಬಗ್ಗೆ ಪ್ಯಾಕೆಜ್ ನೀಡುವ ಚಿಂತನೆಯಲ್ಲಿದೆ. ದೇಶದ ಹತ್ತು ರಾಜ್ಯಗಳಲ್ಲಿ ಪ್ರವಾಹ ಎದುರಾಗಿದ್ದು, ಎಲ್ಲಾ ರಾಜ್ಯದ ನೆರೆ ಹಾನಿ ವರದಿಗಳನ್ನು ಕೇಂದ್ರ ಸರ್ಕಾರ ತರಿಸಿಕೊಳ್ಳುತ್ತಿದೆ. ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೋದಿಯವರು ರಾಜ್ಯಕ್ಕೆ ಸಾವಿರ ಕೋಟಿ ನೀಡುವ ಭರವಸೆಯಿದೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಸಿದ್ದಣ್ಣ ಚಿಕ್ಕಬಿದರಿ, ಸಿದ್ದರಾಜ ಕಲಕೋಟಿ ಉಪಸ್ಥಿತರಿದ್ದರು.