ರಾಣೆಬೆನ್ನೂರು: ಇಲ್ಲಿನ ಟ್ರಾಫಿಕ್ ಸಿಗ್ನಲ್ ಲೈಟ್ಗಳು ಕಾರ್ಯನಿರ್ವಹಿಸದಿದ್ದರೂ ದಂಡ ವಿಧಿಸುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ಸಾರ್ವಜನಿಕರು ದೂರಿದ್ದಾರೆ.
ಹಲಗೇರಿ ವೃತ್ತದಲ್ಲಿ ನಿತ್ಯ ಸಂಚರಿಸುವ ವಾಹನಗಳ ಸಂಖ್ಯೆ ಅಧಿಕವಾಗಿರುತ್ತದೆ. ಆದರಿಲ್ಲಿ ಸಂಚಾರ ದೀಪಗಳು ಕೆಟ್ಟು ಹಲವು ದಿನಗಳಾಗಿವೆ. ಪೊಲೀಸ್ ಇಲಾಖೆ ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಆದರೂ ವಾಹನ ಸವಾರರಿಗೆ ದಂಡ ಹಾಕುತ್ತಿದ್ದಾರೆ ಎಂದು ದೂರುತ್ತಾರೆ ಸಾರ್ವಜನಿಕರು.
ಹೆಲ್ಮೆಟ್ ಕಡ್ಡಾಯ ಜಾರಿಗೊಳಿಸಿದ್ದರೂ ಕ್ಯಾರೆ ಎನ್ನದ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ರಾಜ್ಯದಲ್ಲಿ ಜಾರಿಗೊಳಿಸಿದ ನೂತನ ಮೋಟಾರು ವಾಹನ ಕಾಯ್ದೆಯನ್ನೂ ಸವಾರರು ಅನುಸರಿಸುತ್ತಿಲ್ಲ. ಚಾಲನಾ ಪರವಾನಗಿ, ನಂಬರ್ ಪ್ಲೇಟ್ ಇಲ್ಲ, ವಾಹನ ನೋಂದಣಿ ಮಾಡಿಸಿಲ್ಲ, ಇನ್ಸುರೆನ್ಸ್ ಇಲ್ಲವೇ ಇಲ್ಲ. ನೂರರಲ್ಲಿ ಒಂದೆರಡು ವಾಹನ ಸವಾರರಲ್ಲಿ ಮಾತ್ರ ಸಂಪೂರ್ಣ ದಾಖಲೆಗಳಿರುತ್ತವೆ ಎನ್ನುತ್ತಾರೆ ಪೊಲೀಸರು.