ರಾಣೆಬೆನ್ನೂರು: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ಶಾಸಕ ಅರುಣಕುಮಾರ ಪೂಜಾರ ಮತ್ತು ಅಧಿಕಾರಿಗಳು ಔಷಧಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ರಂಗನಾಥ ನಗರದ ಜ್ಯೋತಿ ಮಡಿವಾಳರ ಮೂರು ವರ್ಷದ ಕಂದಮ್ಮ ಮೂರ್ಛೆ ರೋಗದಿಂದ ಬಳಲುತ್ತಿತ್ತು. ಈ ರೋಗಕ್ಕೆ ಥೈಮನಿ ಹೈಡ್ರಕ್ಲೋರಡಿಕ್ ಸಿರಪ್ ಬೇಕಿತ್ತು, ಆದ್ರೆ ಲಾಕ್ಡೌನ್ ಹಿನ್ನೆಲೆ ಔಷಧಿ ರಾಣೆಬೆನ್ನೂರಿನಲ್ಲಿ ಸಿಕ್ಕಿರಲಿಲ್ಲ. ಇದರಿಂದ ಮಗುವಿನ ಆರೋಗ್ಯ ಹದಗೆಟ್ಟಿತ್ತು. ಈ ಔಷಧಿಯನ್ನು ಮಣಿಪಾಲ್ನಿಂದ ತರಸಿಕೊಡಬೇಕು ಎಂದು ಕಂದಮ್ಮನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಂಡಿದ್ದರು.
ಇದನ್ನು ಗಮನಿಸಿದ ಶಾಸಕರು ಮತ್ತು ಅಧಿಕಾರಿಗಳು ಮಣಿಪಾಲ್ ನ ಕಸ್ತೂರಬಾ ಆಸ್ಪತ್ರೆಯಿಂದ ಔಷಧಿ ತರಿಸಿಕೊಡುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ.