ಹಾವೇರಿ : ಬಸ್ಗಳ ಕೊರತೆಯಿಂದಾಗಿ ಹಾವೇರಿಯಿಂದ ಬೆಂಗಳೂರು, ದಾವಣಗೆರೆ, ತುಮಕೂರು ಕಡೆಗೆ ತೆರಳಬೇಕಿದ್ದ ಪ್ರಯಾಣಿಕರು ಕೆಲಕಾಲ ಹಾವೇರಿ ಬಸ್ ನಿಲ್ದಾಣದಲ್ಲಿ ಪರದಾಡಿದ ಘಟನೆ ಕಳೆದ ರಾತ್ರಿ ನಡೆದಿದೆ.
ಭಾನುವಾರ ಆಗಿದ್ದರಿಂದ ರಜೆಗೆ ಬಂದಿದ್ದವರು ವಾಪಸ್ ಬೆಂಗಳೂರಿನತ್ತ ಹೋಗುವ ಬಸ್ಗಳಿಗಾಗಿ ಕಾದು ಕುಳಿತಿದ್ದರು. ಆದರೆ, ಮದುವೆ ಸೀಸನ್ ಕಾರಣ ಕೆಲ ಬಸ್ಗಳು ಒಪ್ಪಂದದ ಮೇರೆಗೆ ಬಾಡಿಗೆಗೆ ತೆರಳಿದ್ದವು. ಹೀಗಾಗಿ, ಬಸ್‌ನ ಸಮಸ್ಯೆ ಎದುರಾಗಿತ್ತು.
ಬಸ್ಗಳು ಬಾರದ್ದಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ಸಾರಿಗೆ ಇಲಾಖೆ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಕರಿಗೆ ದಾವಣಗೆರೆವರೆಗೆ ಬಸ್‌ನ ವ್ಯವಸ್ಥೆ ಮಾಡಿದರು.
ತುಮಕೂರು, ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಬೇರೆ ಬಸ್ಗಳ ಮೂಲಕ ಹೋಗಲು ಅನುಕೂಲ ಆಗುವಂತೆ ಹಾವೇರಿಯಿಂದ ದಾವಣಗೆರೆವರೆಗೆ ಬಸ್‌ನ ವ್ಯವಸ್ಥೆ ಮಾಡಿದರು.