ETV Bharat / state

ಹಾವೇರಿಯಲ್ಲಿ ಗುಡುಗು ಸಹಿತ ಭಾರಿ ಮಳೆ: ಅಪಾರ ಹಾನಿ - Heavy rains in Haveri

ಬಂಕಾಪುರ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರದ ಛಾವಣಿ ಹಾರಿ ಹೋಗಿ ಸಂಪೂರ್ಣ ಅಂಗನವಾಡಿ ಕಟ್ಟಡಕ್ಕೆ ಹಾನಿಯಾಗಿದೆ, ಗಾರ್ಮೆಂಟ್ಸ್​ವೊಂದರ ಛಾವಣಿ ಹಾರಿ ಒಳಗಿದ್ದ ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳು ಹಾನಿಯಾಗಿವೆ. ಅಲ್ಲದೇ ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಡಾವಣೆಯಲ್ಲಿನ ರಸ್ತೆಯುದ್ದಕ್ಕೂ ವಿದ್ಯುತ್ ತಂತಿಗಳು ಜೋತು ಬಿದ್ದಿವೆ.

ಭಾರಿ ಹಾನಿ
ಭಾರಿ ಹಾನಿ
author img

By

Published : May 1, 2020, 2:21 PM IST

ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಸಂಜೆ ಸುರಿದ ಗುಡುಗು ಸಹಿತ ಮಳೆಯಿಂದ ಶಿಗ್ಗಾಂವಿ ತಾಲೂಕಿನ ಹಲವೆಡೆ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.

ಬಂಕಾಪುರ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರದ ಛಾವಣಿ ಹಾರಿ ಹೋಗಿ ಸಂಪೂರ್ಣ ಅಂಗನವಾಡಿ ಕಟ್ಟಡ ಹಾನಿಯಾಗಿದೆ. ಗಾರ್ಮೆಂಟ್ಸ್​ವೊಂದರ ಛಾವಣಿ ಹಾರಿ ಒಳಗಿದ್ದ ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳಿಗೆ ಹಾನಿಯಾಗಿವೆ. ಅಲ್ಲದೇ ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಡಾವಣೆಯಲ್ಲಿನ ರಸ್ತೆಯುದ್ದಕ್ಕೂ ವಿದ್ಯುತ್ ತಂತಿಗಳು ಜೋತು ಬಿದ್ದಿವೆ.

ಗುಡುಗು ಸಹಿತ ಮಳೆಗೆ ಹಲವೆಡೆ ಭಾರಿ ಹಾನಿ

ಕುಂದೂರು ಗ್ರಾಮದಲ್ಲಿ ಬಾಪುಗೌಡ ಪಾಟೀಲ್​ ಎಂಬುವವರ ಆರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಬಿರುಗಾಳಿಗೆ ನೆಲಕ್ಕುರುಳಿ, ಲಕ್ಷಾಂತರ ರೂ. ನಷ್ಟವಾಗಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದು ಒಂದೆಡೆಯಾದ್ರೆ ಮತ್ತೊಂದೆಡೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.