ಹಾವೇರಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, 34 ಮನೆಗಳಿಗೆ ಹಾನಿಯಾಗಿದೆ.
ಮಂಗಳವಾರ ರಾತ್ರಿಯಿಂದ ಆರಂಭವಾದ ಮಳೆ, ಬುಧವಾರ ಧಾರಾಕಾರವಾಗಿ ಸುರಿಯಿತು. ಜಿಲ್ಲೆಯಾದ್ಯಂತ ಸರಾಸರಿ 30 ಮಿಲಿ ಮೀಟರ್ ಮಳೆಯಾಗಿದ್ದು, 34 ಮನೆಗಳಿಗೆ ಹಾನಿಯಾಗಿದೆ.
ಇನ್ನು, ಧಾರಾಕಾರ ಮಳೆಯಿಂದಾಗಿ ಹಾವೇರಿ ತಾಲೂಕಿನ ನೆಗಳೂರಿನ ರೈತ ನಾಗರಾಜ ಸನಾದಿ ಅವರು ಬೆಳೆದಿದ್ದ 6 ಎಕರೆ ಕಬ್ಬು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.