ಹಾವೇರಿ: ಶ್ರೀ ಸಾಯಿ ಎಂಟರಪ್ರೈಸಸ್ ಸ್ಕೀಂ ಎಂಬ ಹೆಸರಿನಲ್ಲಿ ಜನರಿಗೆ ಡ್ರಾ ಮೂಲಕ ಬಹುಮಾನದ ಆಸೆ ತೋರಿಸಿ ವಂಚಿಸಿರೋ ಘಟನೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಹಲವಾರು ಜನರು ತಲಾ ಆರು ನೂರು ರೂಪಾಯಿಯಂತೆ ಹಣ ತುಂಬಿ ಡ್ರಾ ಕೂಪನ್ ಪಡೆದುಕೊಂಡಿದ್ರು. ಸ್ಕೀಂ ಆರಂಭಿಸಿದವರು ಬಗೆಬಗೆಯ ವಸ್ತುಗಳನ್ನ ಬಹುಮಾನದ ರೂಪದಲ್ಲಿಟ್ಟಿದ್ರು. ಇವತ್ತು ಡ್ರಾ ಮಾಡೋದಾಗಿ ಹೇಳಿದ್ದ ವಂಚಕರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದಾರೆ.
ಡ್ರಾ ಮೂಲಕ ಬಹುಮಾನದ ಆಸೆ ತೋರಿಸಿ ಹಲವಾರು ಜನರಿಗೆ ವಂಚಿಸಿರೋ ವಂಚಕರನ್ನ ಪತ್ತೆ ಮಾಡಿ ಪೊಲೀಸರು ನ್ಯಾಯ ಕೊಡಿಸಬೇಕು ಅಂತಾ ಮೋಸ ಹೋದ ಜನರು ಒತ್ತಾಯಿಸಿದ್ದಾರೆ.