ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕಿತ ಪಿ 639 ಇದೇ 28 ರಂದು ಮುಂಬೈಯಿಂದ ಸವಣೂರಿಗೆ ಬಂದಿದ್ದ ಎನ್ನಲಾಗಿದೆ.
ಮುಂಬೈಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪಿ 639 ಮುಂಬೈಯಿಂದ ಪುಣೆಗೆ ಬಂದು, ಅಲ್ಲಿಂದ ಹುಬ್ಬಳ್ಳಿಗೆ ನಂತರ ಸವಣೂರಿಗೆ ಬಂದಿದ್ದ ಎನ್ನಲಾಗಿದೆ. ಅಲ್ಲದೇ ಈತನ ಜೊತೆ ಅವನ ಅಣ್ಣ (42) ಮತ್ತು ಅಣ್ಣನ ಮಗ (19) ಸಹ ಪ್ರಯಾಣಿಸಿದ್ದರು ಎನ್ನಲಾಗಿದೆ.
ಸೋಂಕಿತ ವ್ಯಕ್ತಿ ಸವಣೂರಿಗೆ ಏ.28ಕ್ಕೆ ಬಂದಿದ್ದ ಬೆನ್ನಲ್ಲಿ ಸ್ಥಳೀಯರು 29 ರಂದು ಆಸ್ಪತ್ರೆಗೆ ಕರೆತಂದಿದ್ದರು. 29 ರಂದು ಸೋಂಕಿತನ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಆತನ ವರದಿ ಇದೇ 3ರಂದು ಬಂದಿದೆ.
ಸೋಂಕಿತನ ಮನೆಯಲ್ಲಿ ಒಟ್ಟು 11 ಜನರಿದ್ದು, ಅವರೆಲ್ಲರನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ ಸೇರಿದಂತೆ 21 ಜನರನ್ನ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈಗಾಗಲೇ 21 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಂಡಲಾಗಿದೆ.